ದೇಶ

ದಾಖಲೆ ಇಲ್ಲದ 31.79 ಲಕ್ಷ ರೂ ಮೌಲ್ಯದ ಹೊಸ ನೋಟು ಹೊಂದಿದ್ದ 8 ಜನರ ಬಂಧನ

ದಾಖಲೆ ಇಲ್ಲದ 31.79 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊಂದಿದ್ದ 8 ಜನರನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.

ದಾಖಲೆ ಇಲ್ಲದ 31.79 ಲಕ್ಷ ರೂ ಮೌಲ್ಯದ ಹೊಸ ನೋಟು ಹೊಂದಿದ್ದ 8 ಜನರ ಬಂಧನ
ದಾಖಲೆ ಇಲ್ಲದ 31.79 ಲಕ್ಷ ರೂ ಮೌಲ್ಯದ ಹೊಸ ನೋಟು ಹೊಂದಿದ್ದ 8 ಜನರ ಬಂಧನ
Published On :
ಜೈಪುರ: ದಾಖಲೆ ಇಲ್ಲದ 31.79 ಲಕ್ಷ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಹೊಂದಿದ್ದ 8 ಜನರನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. 
24 ಲಕ್ಷ ರೂ ಮೌಲ್ಯದ 2000 ರೂ ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು ಉಳಿದ ಹಣ 500, 100, 10 ರೂ ಮುಖಬೆಲೆಯ ನೋಟುಗಳದ್ದಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವದೆಹಲಿಯಿಂದ ಆಗಮಿಸಿದ್ದ ಬಂಧಿತರು ಜೈಪುರದ ಖಾಸಗಿ ಹೋಟೆಲ್ ಒಂದರಲ್ಲಿ ರೂಮ್ ನ್ನು ಬಾಡಿಗೆ ಪಡೆದಿದ್ದ 8 ಜನರ ನಡುವೆ ಹಣಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ, ವಾಗ್ವಾದ ನಡೆದಿದೆ. 
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಣಕ್ಕೆ ದಾಖೆಲೆಯನ್ನು ತೋರಿಸುವಂತೆ ಕೇಳಿದ್ದಾರೆ. ಆದರೆ 8 ಜನರ ಬಳಿ ಅಷ್ಟೊಂದು ಮೊತ್ತದ ಹಣಕ್ಕೆ ಸಂಬಂಧಿಸಿದ ದಾಖಲೆಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು, ಸಿಆರ್ ಪಿಸಿ ಸೆಕ್ಷನ್ ಗಳ ಅಡಿಯಲ್ಲಿ 8 ಜನರನ್ನು ಬಂಧಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.