ತ್ರಿವಳಿ ತಲಾಖ್ ಪ್ರಕರಣಗಳಿಗೆ ಕೇರಳ ಸರ್ಕಾರದಿಂದ ಉಚಿತ ಕಾನೂನು ನೆರವು
ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಯೋಜನೆಯನ್ನು ಕೇರಳ ಸರ್ಕಾರ ಜಾರಿಗೆ ತಂದಿದೆ.

Published On :
ತಿರುವನಂತಪುರಂ: ತ್ರಿವಳಿ ತಲಾಖ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುವ ಯೋಜನೆಯನ್ನು ಕೇರಳ ಸರ್ಕಾರ ಜಾರಿಗೆ ತಂದಿದೆ.
ರಾಜ್ಯ ಅಲ್ಪಸಂಖ್ಯಾತ ಆಯೋಗ ಈ ಕ್ರಮ ಕೈಗೊಂಡಿದ್ದು, ತ್ರಿವಳಿ ತಲಾಖ್ ಗೆ ಗುರಿಯಾಗಿರುವ ಮಹಿಳೆಯರು ಉಚಿತವಾಗಿ ಕಾನೂನು ಸಲಹೆ ಪಡೆಯಲು ಈ ಕ್ರಮ ನೆರವಾಗಲಿದೆ. ನಿವೃತ್ತ ನ್ಯಾ. ಪಿಕೆ ಹನೀಫಾ ನೇತೃತ್ವದ ಅಲ್ಪಸಂಖ್ಯಾತ ಆಯೋಗ 14 ಜಿಲ್ಲೆಗಳಲ್ಲೂ 4 ಮಹಿಳಾ ಅಡ್ವೊಕೇಟ್ ಗಳ ಸಮಿತಿಯನ್ನು ರಚಿಸಿದ್ದು, ತ್ರಿವಳಿ ತಲಾಖ್ ಸಂಬಂಧ ಉಚಿತ ಕಾನೂನು ನೆರವು ನೀಡಲಿದೆ.
ಏ.5 ರಂದು ಅಧಿಕೃತವಾಗಿ ಈ ಯೋಜನೆ ಅಸ್ತಿತ್ವಕ್ಕೆ ಬಂದಿದ್ದು, ಪ್ರಾರಂಭವಾದ 24 ಗಂಟೆಗಳಲ್ಲೇ 21 ದೂರುಗಳು ದಾಖಲಾಗಿವೆ. ತ್ರಿವಳಿ ತಲಾಖ್ ಗೆ ಗುರಿಯಾದ ಮಹಿಳೆಯರು ಸಮಿತಿಯನ್ನು ಸಂಪರ್ಕಿಸಬಹುದಾಗಿದ್ದು, ಇದಕ್ಕಾಗಿಯೇ ಪ್ರತ್ಯೇಕ ಹೆಲ್ಪ್ ಲೈನ್ ನಂಬರ್ ನ್ನೂ ಸಹ ಪ್ರಾರಂಭಿಸಿ (0471-2315122, 2318122) ಉಚಿತವಾಗಿ ಕಾನೂನು ನೆರವು ಪಡೆದು ಕಾನೂನು ಹೋರಾಟ ನಡೆಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Keralaಕೇರಳಅಲ್ಪಸಂಖ್ಯಾತ ಆಯೋಗತ್ರಿವಳಿ ತಲಾಖ್Triple talaq practicefree legal aidminorities commissionಉಚಿತ ಕಾನೂನು ನೆರವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


