ದೇಶ

ಭಾರತ ನನ್ನನ್ನು ಎಂದಿಗೂ ಚೀನಾದ ವಿರುದ್ಧ ಬಳಸಿಕೊಂಡಿಲ್ಲ: ದಲೈ ಲಾಮ

ಭಾರತ ತಮ್ಮನ್ನು ಎಂದಿಗೂ ಚೀನಾ ವಿರುದ್ಧ ಬಳಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಭಾರತ ನನ್ನನ್ನು ಎಂದಿಗೂ ಚೀನಾದ ವಿರುದ್ಧ ಬಳಸಿಕೊಂಡಿಲ್ಲ: ದಲೈ ಲಾಮ
ದಲೈ ಲಾಮ
Published On :
ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ ನೀಡಿದ್ದಕ್ಕೆ  ಚೀನಾ ನಖಶಿಖಾಂತ ಉರಿದುಕೊಂಡಿದೆ. ಆದರೆ ದಲೈ ಲಾಮ ಮಾತ್ರ ಶಾಂತಿಯಿಂದ ಪ್ರತಿಕ್ರಿಯೆ ನೀಡಿದ್ದು, ಭಾರತ ತಮ್ಮನ್ನು ಎಂದಿಗೂ ಚೀನಾ ವಿರುದ್ಧ ಬಳಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 
ನಾನು ಭಾರತೀಯ ಪುರಾತನ ತತ್ವದ ಸಂದೇಶ ಸಾರುವವನಾಗಿದ್ದು, ಎಲ್ಲೇ ಹೋದರೂ ಭಾರತದ ಪುರಾತನ ತತ್ವಗಳಾದ ಶಾಂತಿ, ಅಹಿಂಸೆ, ಸಹಬಾಳ್ವೆ ಹಾಗೂ ಜಾತ್ಯಾತೀತ ತತ್ವಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೀನಾ, ಭಾರತ ದಲೈ ಲಾಮ ಅವರನ್ನು ಚೀನಾದ ವಿರುದ್ಧ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು. 
ನಾನೊಬ್ಬ ಬೌದ್ಧ. ಹಿಮಾಲಯದ ಶ್ರೇಣಿ ಸಾಂಪ್ರದಾಯಿಕವಾಗಿ ಬೌದ್ಧ ತತ್ವವನ್ನು ಅನುಸರಿಸುತ್ತಿದೆ. ಆಧುನಿಕ ಭೌತಶಾಸ್ತ್ರವೂ ಸಹ ಬೌದ್ಧಧರ್ಮದ ತತ್ವವನ್ನೇ ಆಧರಿಸಿದೆ. ನನಗೆ ಸ್ವಾತಂತ್ರ್ಯ ಸಿಕ್ಕಾಗ ನಾನು ಅರುಣಾಚಲ ಪ್ರದೇಶದ ಮೂಲಕ ಭಾರತಕ್ಕೆ ಬಂದೆ, ಅರುಣಾಚಲ ಪ್ರದೇಶದೊಂದಿಗೆ ನನಗೆ ಭಾವನಾತ್ಮಕ ನಂಟಿದ್ದು, ಇದೊಂದು ವಿಶೇಷವಾದ ಸ್ಥಳ ಎಂದು ದಲೈ ಲಾಮ ಹೇಳಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.