ದೇಶ

ಏನಿದು 'ಮಮ್ಮಿ', 'ಯಮ್ಮಿ': ಒವೈಸಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ

ಬಿಜೆಪಿಯವರಿಗೆ ಉತ್ತರಪ್ರದೇಶದಲ್ಲಿ ಗೋವು ಮಮ್ಮಿ(ತಾಯಿ)ಯ ಸಮಾನ, ಆದರೆ, ಈಶಾನ್ಯ ರಾಜ್ಯಗಳಲ್ಲಿ ಗೋವು ಯಮ್ಮಿ(ರುಚಿಕರ ಖಾದ್ಯ)ವಾಗಿದೆ ಎಂದು ಹೇಳಿದ್ದ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿ ನಾಯಕ...

ಏನಿದು 'ಮಮ್ಮಿ', 'ಯಮ್ಮಿ': ಒವೈಸಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
Published On :
ನವದೆಹಲಿ: ಬಿಜೆಪಿಯವರಿಗೆ ಉತ್ತರಪ್ರದೇಶದಲ್ಲಿ ಗೋವು ಮಮ್ಮಿ(ತಾಯಿ)ಯ ಸಮಾನ, ಆದರೆ, ಈಶಾನ್ಯ ರಾಜ್ಯಗಳಲ್ಲಿ ಗೋವು ಯಮ್ಮಿ(ರುಚಿಕರ ಖಾದ್ಯ)ವಾಗಿದೆ ಎಂದು ಹೇಳಿದ್ದ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಭಾನುವಾರ ಕಿಡಿಕಾರಿದ್ದಾರೆ. 
ಒವೈಸಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಏನಿದು 'ಮಮ್ಮಿ', 'ಯಮ್ಮಿ'...ಭಾರತೀಯ ಸಂವಿಧಾನದ ಅನುಚ್ಛೇದ 48ರಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಒವೈಸಿಗೆ ಭಾರತೀಯ ಸಂವಿಧಾನದ ಮೇಲೆ ನಂಬಿಕೆ ಇದೆ ಎಂದಾದರೆ ಇದನ್ನು ಒಪ್ಪಿಕೊಳ್ಳಬೇಕು. ಇಲ್ಲವೇ ಸಂವಿಧಾನದ ಮೇಲೆ ನಂಬಿಕೆಯಿಲ್ಲ ಎಂದು ಹೇಳಲಿ ಮುಂದಿನದ್ದು ನೋಡೋಣ ಎಂದು ಹೇಳಿದ್ದಾರೆ. 
ಅನುಚ್ಛೇದ 48ರ ಪ್ರಕಾರ, ಗೋ ತಳಿಗಳ ಸುಧಾರಣೆ ಮತ್ತು ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಗೋವುಗಳು, ಕರುಗಳು, ಹಾಲು ಕೊಡುವ ಇತರೆ ಪ್ರಾಣಿಗಳು ಮತ್ತು ಕೆಲಸಕ್ಕೆ ಬಳಸುವ ಪ್ರಾಣಿಗಳ ಹತ್ಯೆಯನ್ನು ಅಗತ್ಯವಾಗಿ ನಿಷೇಧಿಸಬೇಕು. ಇದಲ್ಲದೆ, ಪ್ರತಿಯೊಂದೂ ಜೀವಿಯನ್ನೂ ಸಹಾನುಭೂತಿ, ಕರುಣೆಯೊಂದಿಗೆ ನೋಡಬೇಕೆಂದು ತಿಳಿಸಿದೆ. 
ಗೋಹತ್ಯೆ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಒವೈಸಿ, ಬಿಜೆಪಿಯವರಿಗೆ ಉತ್ತರಪ್ರದೇಶದಲ್ಲಿ ಗೋವು ಮಮ್ಮಿ(ತಾಯಿ)ಯ ಸಮಾನ, ಆದರೆ, ಈಶಾನ್ಯ ರಾಜ್ಯಗಳಲ್ಲಿ ಗೋವು ಯಮ್ಮಿ(ರುಚಿಕರ ಖಾದ್ಯ)ವಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಗೋವು ರಕ್ಷಣೆಗೆ ಬಿಜೆಪಿ ಪಣತೊಟ್ಟಿದೆ. ಆದರೆ, ಕ್ರೈಸ್ತರ ಜನಸಂಖ್ಯೆ ಇರುವ ಮಣಿಪುರದಲ್ಲಿ ಗೋಮಾಂಸ ನಿಷೇಧಕ್ಕೆ ಬಿಜೆಪಿ ಮುಂದಾಗಿಲ್ಲ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.