ದೇಶ

ನಕಲಿ ನೋಟು ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪ್ರತಿ 3-4 ವರ್ಷಕ್ಕೆ ಭದ್ರತಾ ಗುರುತು ಬದಲು!

ಹೊಸ ನೋಟುಗಳನ್ನು ನಕಲು ಮಾಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.

ನಕಲಿ ನೋಟು ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪ್ರತಿ 3-4 ವರ್ಷಕ್ಕೆ ಭದ್ರತಾ ಗುರುತು ಬದಲು!
ನಕಲಿ ನೋಟು ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪ್ರತಿ 3-4 ವರ್ಷಕ್ಕೆ ಭದ್ರತಾ ಗುರುತು ಬದಲು!
Published On :
ನವದೆಹಲಿ: 1000, 500 ರೂ ನೋಟುಗಳ ನಿಷೇಧದ ನಂತರ ಬಿಡುಗಡೆಯಾಗಿದ್ದ ಹೊಸ 2000, 500 ರೂ ನೋಟುಗಳನ್ನೂ ನಕಲು ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೊಸ ನೋಟುಗಳನ್ನು ನಕಲು ಮಾಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. 
ನಕಲಿ ನೋಟುಗಳನ್ನು ತಡೆಗಟ್ಟಲು ಪ್ರತಿ 3-4 ವರ್ಷಗಳಿಗೊಮ್ಮೆ ನೋಟುಗಳ ಭದ್ರತಾ ಗುರುತನ್ನು ಬದಲಾವಣೆ ಮಾಡಲು ಗೃಹ ಸಚಿವಾಲಯದ ಅಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡಿದೆ. ವಿದೇಶಗಳಲ್ಲಿ ನಕಲಿ ನೋಟಿನ ಹಾವಳಿ ತಡೆಗಟ್ಟಲು ಪ್ರತಿ 3-4 ವರ್ಷಕ್ಕೆ ನೋಟುಗಳ ಭದ್ರತಾ ಗುರುತನ್ನು ಬದಲಾವಣೆ ಮಾಡಲಾಗುತ್ತದೆ. ಇದೇ ಮಾದರಿಯನ್ನು ಭಾರತದಲ್ಲೂ ಜಾರಿಗೆ ತರಲು ಉನ್ನತ ಮಟ್ಟದ ಸಭೆಯಲ್ಲಿ ಗೃಹ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. 
ಗರಿಷ್ಠ ಮುಖಬೆಲೆಯ ನೋಟುಗಳಲ್ಲಿನ ಭದ್ರತಾ ಅಂಶಗಳ ಬದಲಾವಣೆ ಭಾರತೀಯ ಕರೆನ್ಸಿಗಳಲ್ಲಿ ದೀರ್ಘಕಾಲದ ವರೆಗೆ ನಡೆದಿರಲಿಲ್ಲ. ನೋಟು ನಿಷೇಧವಾಗುವವರೆಗೂ 1000 ನೋಟುಗಳಲ್ಲಿಯೂ ಸಹ  ಭದ್ರತಾ ಗುರುತುಗಳಲ್ಲಿ ಪ್ರಮುಖವಾದ ಬದಲಾವಣೆಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಅಂದರೆ ಕನಿಷ್ಠ 3-4 ವರ್ಷಗಳಿಗೆ ಒಮ್ಮ ಭದ್ರತಾ ಗುರುತು ಬದಲು ಮಾಡಬೇಕೆಂಬ ಒತ್ತಾಯ ಅಧಿಕಾರಿಗಳ ವರ್ಗದಿಂದ ಕೇಳಿಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.