ಪಾಕ್ನಿಂದ 8 ಯೋಧರ ಹತ್ಯೆ, ಯೋಧನೋರ್ವನ ವಶ ವರದಿಯನ್ನು ತಳ್ಳಿ ಹಾಕಿದ ಭಾರತೀಯ ಸೇನೆ
ಭಾರತ ಪಾಕಿಸ್ತಾನ ಯೋಧರ ನಡುವಿನ ಪರಸ್ಪರ ಗುಂಡಿನ ದಾಳಿಯಲ್ಲಿ 8 ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿ, ಓರ್ವ ಭಾರತೀಯ ಯೋಧನನ್ನು...

ಮುಜಾಫರ್ಬಾದ್: ಭಾರತ ಪಾಕಿಸ್ತಾನ ಯೋಧರ ನಡುವಿನ ಪರಸ್ಪರ ಗುಂಡಿನ ದಾಳಿಯಲ್ಲಿ 8 ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿ, ಓರ್ವ ಭಾರತೀಯ ಯೋಧನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಪಾಕ್ ಪತ್ರಿಕೆಯ ವರದಿಯನ್ನು ಭಾರತೀಯ ಸೇನೆ ತಳ್ಳಿ ಹಾಕಿದೆ.
ಈ ಹಿಂದೆ ನಮ್ಮ ಯೋಧನೋರ್ವ ಶಸ್ತ್ರಾಸ್ತ್ರದೊಂದಿಗೆ ಗಡಿ ನಿಯಂತ್ರಣ ರೇಖೆ ದಾಟಿದ್ದು ಆತನನ್ನು ಪಾಕ್ ಯೋಧರು ಸೆರೆಹಿಡಿದಿದ್ದು ಆತನನ್ನು ಮರಳಿ ಕರೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.
ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಪಾಕಿಸ್ತಾನ ಯೋಧರು ಹತ್ಯೆಯಾದ ಸಂದರ್ಭದಲ್ಲೇ 8 ಭಾರತೀಯ ಯೋಧರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ. ಅಲ್ಲದೆ ಓರ್ವ ಭಾರತೀಯ ಯೋಧನನ್ನು ಪಾಕ್ ಸೇನೆ ಬಂಧಿಸಿದೆ. ಪಾಕ್ ಯೋಧರು ಮಹಾರಾಷ್ಟ್ರ ಮೂಲದ 22 ವರ್ಷದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಯೋಧನ ತಂದೆ ಭೂಷನ್ ಚೌಹಾಣ್ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


