ದೇಶ

ಎಕೆ-47ನಿಂದ ಗುಂಡು ಹಾರಿಸಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಬಾಲಕಿ, ವಿಡಿಯೋ ವೈರಲ್

ಉರಿ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದಲ್ಲಿ ಟ್ವೀಟ್ ವಾರ್ ಗಳು ಶುರವಾಗಿದ್ದು. ಈ ಮಧ್ಯೆ ತಂದೆಯ ಕೈಯಲ್ಲಿದ್ದ ಎಕೆ-47 ಗನ್ ನಿಂದ ಮಗಳು ಗುಂಡು ಹಾರಿಸಿ ಪ್ರಧಾನಮಂತ್ರಿ...

ಎಕೆ-47ನಿಂದ ಗುಂಡು ಹಾರಿಸಿ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ ಬಾಲಕಿ, ವಿಡಿಯೋ ವೈರಲ್
ನರೇಂದ್ರ ಮೋದಿ
Published On :
ಉರಿ ದಾಳಿ ಬಳಿಕ ಪಾಕಿಸ್ತಾನ ಹಾಗೂ ಭಾರತದಲ್ಲಿ ಟ್ವೀಟ್ ವಾರ್ ಗಳು ಶುರವಾಗಿದ್ದು. ಈ ಮಧ್ಯೆ ತಂದೆಯ ಕೈಯಲ್ಲಿದ್ದ ಎಕೆ-47 ಗನ್ ನಿಂದ ಮಗಳು ಗುಂಡು ಹಾರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡುವಂತ ಮಾತುಗಳನ್ನಾಡಿದ್ದಾಳೆ. 
ಈ ವಿಡಿಯೋದಲ್ಲಿ ಬಾಲಕಿಯ ಮಾತುಗಳು ಸ್ಪಷ್ಟವಾಗಿಲ್ಲ. ಆದರೆ ಆಕೆಯ ಮಾತಿನ ಮಧ್ಯದಲ್ಲಿ ಮೋದಿ ಮತ್ತು ಭಾರತ ಎಂಬ ಪದಗಳು ವ್ಯಕ್ತವಾಗಿರುವುದು ಗಮನಿಸಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ 19 ಯೋಧರ ಸಾವಿಗೆ ಕಾರಣರಾಗಿದ್ದರು. ಇದಾದ ಬಳಿಕ ಪಾಕಿಸ್ತಾನ ಮತ್ತು ಭಾರತದಲ್ಲಿ ನಡುವಿನ ಬಾಂಧವ್ಯ ಅಳಸಿದ್ದು ಒಬ್ಬರ ಮೇಲೊಬ್ಬರು ಕೆಸರೆರೆಚಾಡಿಕೊಳ್ಳುತ್ತಿದ್ದಾರೆ. 
ಭಾರತ ಹಾಗೂ ಪ್ರಧಾನಿ ಬಗ್ಗೆ ಮಾತನಾಡಿರುವ ಈ ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಜತೆಗೆ ಬಾಲಕಿಯ ತಂದೆ ಮಕ್ಕಳಲ್ಲಿ ಇಂತಹ ದ್ವೇಷ ಭಾವನೆ ತುಂಬುವುದಕ್ಕಿಂತ ಅವರ ಕೈಗೆ ಗನ್ ಬದಲಾಗಿ ಪೇನ್ ನೀಡಿ ಎಂದು ಬರೆದುಕೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.