ಪವಿತ್ರ ಗ್ರಂಥಗಳ ಹರಿದ ದುಷ್ಕರ್ಮಿಗಳು; ಜಲಂಧರ್ ನಲ್ಲಿ ವ್ಯಾಪಕ ಪ್ರತಿಭಟನೆ
ಸಿಖ್ಖರ ಪವಿತ್ರ ಗ್ರಂಥ 'ಗುರು ಗ್ರಂಥ್ ಸಾಹೀಬ್' ಹಾಗೂ 'ಭಗವದ್ಗೀತೆ'ಯ ಹಾಳೆಗಳು ಕಾಲುವೆಯೊಂದರಲ್ಲಿ ಸಿಕ್ಕ ಹಿನ್ನೆಲೆಯಲ್ಲಿ ಜಲಂಧರ್ ನ ಕಪುರ್ಥಾಲಾ ಚೌಕ್ ಪ್ರದೇಶದಲ್ಲಿ...

ಜಲಂಧರ್: ಸಿಖ್ಖರ ಪವಿತ್ರ ಗ್ರಂಥ 'ಗುರು ಗ್ರಂಥ್ ಸಾಹೀಬ್' ಹಾಗೂ 'ಭಗವದ್ಗೀತೆ'ಯ ಹಾಳೆಗಳು ಕಾಲುವೆಯೊಂದರಲ್ಲಿ ಸಿಕ್ಕ ಹಿನ್ನೆಲೆಯಲ್ಲಿ ಜಲಂಧರ್ ನ ಕಪುರ್ಥಾಲಾ ಚೌಕ್ ಪ್ರದೇಶದಲ್ಲಿ ಹಲವು ಪ್ರತಿಭಟನೆಗಳು ಸೋಮವಾರ ಆರಂಭವಾಗಿದೆ.
ಸಿಖ್ ತಲ್ಮೆಲ್ ಸಮಿತಿ ಹಾಗೂ ಕೆಲಸ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗಿಳಿದಿದ್ದು ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗದಂತೆ ಎಚ್ಚರಿಕೆ ವಹಿಸಿರುವ ಅಲ್ಲಿನ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಕೆಲ ದುಷ್ಕರ್ಮಿಗಳು 'ಗುರು ಗ್ರಂಥ್ ಸಾಹೀಬ್' ಮತ್ತು 'ಭಗವದ್ಗೀತೆ' ಪುಸ್ತಕದ 200ಕ್ಕೂ ಹೆಚ್ಚು ಹಾಳೆಗಳನ್ನು ಹರಿದಿದ್ದು, ಹಾಳೆಗಳನ್ನು ಕಪುರ್ಥಲಾ ಚೌಕ್'ನ ಶೇರ್ ಸಿಂಗ್ ಕಾಲೋನಿ ಬಳಿಯಿರುವ ಬಿಸ್ತ್-ಡೊಬ್ ಕಾಲುವೆಯೊಂದಕ್ಕೆ ಎಸೆದಿದ್ದಾರೆ. ಹಾಳೆಗಳು ಕಾಲುವೆಯಲ್ಲಿ ತೇಲುತ್ತಿದ್ದುದ್ದನ್ನು ಸ್ಥಳೀಯರು ನೋಡಿದ್ದಾರೆ. ಕೂಡಲೇ ಕಾಲುವೆಗೆ ಇಳಿದು ಹಾಳೆಗಳನ್ನು ತೆಗೆಯಲು ಆರಂಭಿಸಿದ್ದರು. ಸುದ್ದಿ ಹರಡುತ್ತಿದ್ದಂತೆ, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


