ಯುದ್ಧ ಅನಿವಾರ್ಯವಾದರೆ ಸೈನಿಕರೊಂದಿಗೆ ಯುದ್ಧದಲ್ಲಿ ಪಾಲ್ಗೊಳ್ಳುವೆ: ಅಣ್ಣಾ ಹಜಾರೆ
ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವಾದರೆ ತಾವು ಖಂಡಿಕ ಗಡಿಗೆ ತೆರಳಿ ಸೈನಿಕರೊಂದಿಗೆ ಸೇರಿ ಯುದ್ಧ ಮಾಡುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಮುಂಬೈ: ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವಾದರೆ ತಾವು ಖಂಡಿಕ ಗಡಿಗೆ ತೆರಳಿ ಸೈನಿಕರೊಂದಿಗೆ ಸೇರಿ ಯುದ್ಧ ಮಾಡುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಹಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಣ್ಣಾ ಹಜಾರೆ ಅವರು, 18 ಭಾರತೀಯ ಸೈನಿಕರ ಸಾವಿಗೆ ಕಾರಣವಾದ ಉರಿ ಉಗ್ರದಾಳಿಯನ್ನು ಖಂಡಿಸಿದರು. ಪಾಕಿಸ್ತಾನ ನಮ್ಮ ನೆರೆ-ಹೊರೆಯ ದೇಶವಾಗಿದ್ದು, ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ನಮ್ಮ ಸೈನಿಕರ ಮೇಲೆ ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ದಾಳಿ ನಡೆಸುತ್ತಿದ್ದು, ಉರಿ ಉಗ್ರ ದಾಳಿ ಇದೇ ಮೊದಲ ದಾಳಿ ಏನೂ ಆಲ್ಲ. ದಾಳಿಗಳ ಮೂಲಕ ದೇಶದ ಅಭಿವೃದ್ಧಿಗೆ ತೊಡಕುಂಟು ಮಾಡಲು ಅವರು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಅಂತೆಯೇ ಪಾಕಿಸ್ತಾನ ಮಾತುಕೇಳಲು ಸಿದ್ಧವಿಲ್ಲ ಎಂದಾದರೆ, ಅಥವಾ ಆ ದೇಶದೊಂದಿಗೆ ಯುದ್ಧ ಅನಿವಾರ್ಯವಾದರೆ ಖಂಡಿತ ನಾನು ಕೂಡ ಯುದ್ಧ ಭೂಮಿಗೆ ತೆರಳುತ್ತೇನೆ. ನನಗೆ 79 ವರ್ಷದ ಆದರೂ ಕೂಡ ಸೈನಿಕರೊಂದಿಗೆ ಗಡಿಗೆ ತೆರಳಿ ಹೋರಾಡುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದರು.
1965ರಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಅಣ್ಣಾ ಹಜಾರೆ, ಟ್ರಕ್ ಚಾಲಕರಾಗಿ ಸೇನೆ ಸೇರಿದ್ದರು. ಆ ಬಳಿಕ ಸೈನಿಕರಾಗಿ ಬಡ್ತಿ ಪಡೆದಿದ್ದ ಅವರು, 1965ರ ಭಾರತ-ಪಾಕ್ ಯುದ್ಧದಲ್ಲಿ ಗಡಿ ಭಾಗದ ಖೇಮ್ ಕರಣ್ ಸೆಕ್ಟರ್ನಲ್ಲಿ ಹೋರಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


