ದೇಶ

ಪ್ರತಿ ಉಗ್ರ ಕೃತ್ಯದ ಲೆಕ್ಕವನ್ನು ಚುಕ್ತಾ ಮಾಡುತ್ತೇವೆ: ಪಾಕ್ ವಿರುದ್ಧ ಪ್ರಧಾನಿ ಗುಡುಗು

21ನೇ ಶತಮಾನದಲ್ಲಿ ಏಷ್ಯಾದ ಎಲ್ಲಾ ರಾಷ್ಟ್ರಗಳು ಅಭಿವೃದ್ದಿಯತ್ತ ಮುನ್ನಡೆಯುತ್ತಿವೆ. ಆದರೆ ಒಂದು ರಾಷ್ಟ್ರ ಮಾತ್ರ ಅಶಾಂತಿಯತ್ತ...

ಪ್ರತಿ ಉಗ್ರ ಕೃತ್ಯದ ಲೆಕ್ಕವನ್ನು ಚುಕ್ತಾ ಮಾಡುತ್ತೇವೆ: ಪಾಕ್ ವಿರುದ್ಧ ಪ್ರಧಾನಿ ಗುಡುಗು
ನರೇಂದ್ರ ಮೋದಿ
Published On :
ಕೋಝಿಕೊಡ್: 21ನೇ ಶತಮಾನದಲ್ಲಿ ಏಷ್ಯಾದ ಎಲ್ಲಾ ರಾಷ್ಟ್ರಗಳು ಅಭಿವೃದ್ದಿಯತ್ತ ಮುನ್ನಡೆಯುತ್ತಿವೆ. ಆದರೆ ಒಂದು ರಾಷ್ಟ್ರ ಮಾತ್ರ ಅಶಾಂತಿಯತ್ತ ಸಾಗುತ್ತಿದೆ ಮತ್ತು ರಕ್ತಪಾತವನ್ನು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಉರಿ ಉಗ್ರ ದಾಳಿಯ ನಂತರ ಇದೇ ಮೊದಲ ಬಾರಿಗೆ ಕೋಝಿಕೊಡ್ ನಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ 18 ಯೋಧರ ಬಲಿದಾನವಾಗಿದೆ. ಇದನ್ನು ನಮ್ಮ ದೇಶ ಎಂದಿಗೂ ಮರೆಯುವುದಿಲ್ಲ. ಇದು ಪಕ್ಕದ ದೇಶದ ಕೃತ್ಯ ಅಂತಾನೂ ನಮಗೆ ಗೊತ್ತು. ಆದರೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಮರೆಯುವುದು ಇಲ್ಲ ಮತ್ತು ಕ್ಷಮಿಸುವುದು ಇಲ್ಲ. ಪ್ರತಿ ಉಗ್ರ ಕೃತ್ಯದ ಲೆಕ್ಕವನ್ನು ಚುಕ್ತಾ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಏಷ್ಯಾದ್ಯಂತ ಎಲ್ಲೇ ಉಗ್ರ ದಾಳಿ ನಡೆದರೂ ಅದಕ್ಕೆ ಆ ಒಂದು ದೇಶ(ಪಾಕಿಸ್ತಾನ) ಕಾರಣ ಎಂದು ಆರೋಪಿಸಲಾಗುತ್ತದೆ. ಪ್ರತಿ ದಾಳಿಯ ಉಗ್ರರು ಪಕ್ಕದ ದೇಶದ ಉಗ್ರರಾಗಿರುತ್ತಾರೆ ಇಲ್ಲವೇ ಅಲ್ಲಿಯೇ ತರಬೇತಿ ಪಡೆದವರಾಗಿರುತ್ತಾರೆ ಎಂದು ಮೋದಿ ಪಾಕ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 
ನಮ್ಮ ದೇಶ ಸಾಫ್ಟ್ ವೇರ್ ಅನ್ನು ರಫ್ತು ಮಾಡುತ್ತಿದೆ. ಆದರೆ ಒಂದು ದೇಶ ವಿಶ್ವದಾದ್ಯಂತ ನಾಲ್ಕು ದಿಕ್ಕುಗಳಲ್ಲೂ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಭಯೋತ್ಪಾದಕರಿಗೆ ಅದು ಸ್ವರ್ಗವಾಗಿದ್ದು, ಎಲ್ಲೆಡೆ ರಕ್ತಹರಿಸುವ ಆತಂಕವಾದವನ್ನು ಹರಡುತ್ತಿದೆ ಎಂದು ಆರೋಪಿಸಿದ ಪ್ರಧಾನಿ, ಪಾಕಿಸ್ತಾನ ಮುಖ್ಯಸ್ಥರಿಗೆ ನೇರವಾಗಿಯೇ ಪ್ರಶ್ನಿಸುತ್ತೇನೆ, ಆತಂಕವಾದಿಗಳು ಬರೆದುಕೊಟ್ಟ ಭಾಷಣವನ್ನು ಎಷ್ಟು ದಿನ ಓದುತ್ತೀರಿ?.
ಆತ್ಮಾಹುತಿ ದಾಳಿಗೆ ಬಂದ ಹಲವು ಉಗ್ರರನ್ನು ನಮ್ಮ ಯೋಧರು ಸಾವಿನ ಮನೆ ತೋರಿಸಿದ್ದಾರೆ. ಭಾರತದ ಧೀರ ಯೋಧರು ಗಡಿ ದಾಟಲು ಬಂದ ಹಲವು ಉಗ್ರರನ್ನು ಹಿಮ್ಮೆಟ್ಟಿಸುವ ಮೂಲಕ ಸುಮಾರು 17 ಉಗ್ರ ದಾಳಿಗಳನ್ನು ತಪ್ಪಿಸಿದ್ದಾರೆ ಎಂದು ಪ್ರಧಾನಿ ಸೈನಕರನ್ನು ಶ್ಲಾಘಿಸಿದರು.
ಕೋಝಿಕೊಡ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾಗವಹಿಸಲು ಪ್ರಧಾನಿ ಕೇರಳಕ್ಕೆ ಆಗಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.