8 ಗ್ರಾಂ ಚಿನ್ನದ ನಾಣ್ಯ ವಿತರಣೆಗೆ ಚಾಲನೆ ನೀಡಿದ ತಮಿಳುನಾಡು ಸಿಎಂ
ಇತ್ತೀಚಿಗಷ್ಟೇ ಅಮ್ಮಾ ಮ್ಯಾರೇಜ್ ಹಾಲ್ ನಿರ್ಮಿಸುವುದಾಗಿ ಘೋಷಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಗುರುವಾರ ಮದುವೆ ಸಹಾಯ..

Published On :
ಚೆನ್ನೈ: ಇತ್ತೀಚಿಗಷ್ಟೇ ಅಮ್ಮಾ ಮ್ಯಾರೇಜ್ ಹಾಲ್ ನಿರ್ಮಿಸುವುದಾಗಿ ಘೋಷಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಗುರುವಾರ ಮದುವೆ ಸಹಾಯ ಯೋಜನೆಯಡಿ 12,500 ಮಹಿಳೆಯರಿಗೆ 8 ಗ್ರಾಂ ಚಿನ್ನದ ನಾಣ್ಯ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಜಯಲಲಿತಾ ಅವರು ಇಂದು ತಮ್ಮ ಸ್ವಕ್ಷೇತ್ರ ರಾಧಾಕೃಷ್ಣ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐವರು ಮಹಿಳೆಯರಿಗೆ ಚಿನ್ನದ ನಾಣ್ಯ ವಿತರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಮದುವೆ ಸಹಾಯ ಯೋಜನೆಯಡಿ ಕಳೆದ ಮೇ 23ರಿಂದ ಇದುವರೆಗೆ ನೋಂದಣಿಯಾಗಿರುವ 12, 500 ಮಹಿಳೆಯರಿಗೆ ತಮಿಳುನಾಡು ಸರ್ಕಾರ 8 ಗ್ರಾಂ ತೂಕದ ಚಿನ್ನದ ನಾಣ್ಯ ವಿತರಿಸುತ್ತಿದ್ದು, ಈ ಸಂಬಂಧ 204 ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಐಎಡಿಎಂಕೆ ಸರ್ಕಾರ 2011ರಿಂದ 10ನೇ ತರಗತಿ ಓದಿದ ಮಹಿಳೆಯರಿಗೆ ಅವರ ಮದುವೆಗಾಗಿ 25 ಸಾವಿರ ರುಪಾಯಿ ನಗದು ಹಾಗೂ ನಾಲ್ಕು ಗ್ರಾಂ ಚಿನ್ನದ ನಾಣ್ಯ ಮತ್ತು ಪದವಿ ಅಥವಾ ಡಿಪ್ಲೋಮಾ ಮಾಡಿದ ಮಹಿಳೆಯರಿಗೆ 50 ಸಾವಿರ ರುಪಾಯಿ ಹಾಗೂ ಚಿನ್ನದ ನಾಣ್ಯವನ್ನು ನೀಡುತ್ತಿದೆ. ಆದರೆ ಜಯಲಿಲತಾ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ನಾಲ್ಕು ಗ್ರಾಂ ಬದಲಾಗಿ 8 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ ಘೋಷಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


