'ಲೋಕ ಕಲ್ಯಾಣ ಮಾರ್ಗ' ವಾಗಿ ಬದಲಾಯ್ತು ಪ್ರಧಾನಿ ನಿವಾಸವಿರುವ ರೇಸ್ ಕೋರ್ಸ್ ರಸ್ತೆ ಹೆಸರು
ಪ್ರಧಾನ ಮಂತ್ರಿ ನಿವಾಸವಿರುವ ದೆಹಲಿಯ ಲೂಟೆನ್ಸ್‌ನ ಪ್ರಸಿದ್ಧ ರೇಸ್ ಕೋರ್ಸ್ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಹೆಸರು ಬದಲಾವಣೆಗೊಳ್ಳಲಿದೆ.

ನವದೆಹಲಿ: ಪ್ರಧಾನ ಮಂತ್ರಿ ನಿವಾಸವಿರುವ ದೆಹಲಿಯ ಲೂಟೆನ್ಸ್‌ನ ಪ್ರಸಿದ್ಧ ರೇಸ್ ಕೋರ್ಸ್ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಹೆಸರು ಬದಲಾವಣೆಗೊಳ್ಳಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ನವದೆಹಲಿ ನಗರಸಭೆ ಸಮಿತಿಯ (ಎನ್‌ಡಿಎಂಸಿ) ಉನ್ನತ ಮಟ್ಟದ ಸಭೆಯಲ್ಲಿ ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದ್ದು ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ.
ದೀನ್‌ದಯಾಳ್ ಉಪಾಧ್ಯ ಅವರ ಸಿದ್ಧಾಂತ ಉಲ್ಲೇಖಿಸಿ ರೇಸ್‌ಕೋರ್ಸ್ ರಸ್ತೆಗೆ ‘ಏಕಾತ್ಮ ಮಾರ್ಗ’ ಎಂದು ಹೆಸರಿಡುವಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಪ್ರಸ್ತಾಪಿಸಿದರು. ಇದೇ ರಸ್ತೆಗೆ ಸಿಖ್ಖರ 10ನೇ ಧರ್ಮಗುರು ಗುರುಗೋವಿಂದ ಸಿಂಗ್ ಅವರ ಹೆಸರಿಡುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಸ್ತಾಪಿಸಿದರು. ಆದರೆ ಸಭೆಯಲ್ಲಿ ಸಮ್ಮತಿ ಸಿಗಲಿಲ್ಲ.
ರೇಸ್‌ಕೋರ್ಸ್ ರಸ್ತೆ ಮರು ನಾಮಕರಣ ಬಗ್ಗೆ ಪ್ರಧಾನಿಯನ್ನು ಸಂಪರ್ಕಿಸಲು ಸಲಹೆ ನೀಡಿದೆ. ಆದರೆ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಆಧರಿಸಿ ಸಮಿತಿ ಸದಸ್ಯರು ‘ಲೋಕಕಲ್ಯಾಣ ಮಾರ್ಗ’ ಎಂದು ಬದಲಿಸಲು ನಿರ್ಧರಿಸಿದರು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಒಮ್ಮೆ ಅಧಿಸೂಚನೆಯು ಜಾರಿಯಾದರೆ, ಪ್ರಧಾನಿಯ ಅಧಿಕೃತ ನಿವಾಸದ ವಿಳಾಸ: 7, ಲೋಕಕಲ್ಯಾಣ ಮಾರ್ಗ, ನವದೆಹಲಿ ಎಂದು ಬದಲಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


