ಉರಿ ಉಗ್ರ ದಾಳಿಯ ಹೊರತಾಗಿಯೂ ಶ್ರೀನಗರ- ಮುಜಾಫರಾಬಾದ್ ಬಸ್ ಸಂಚಾರಕ್ಕಿಲ್ಲ ನಿರ್ಬಂಧ!
ಭಾರತ- ಪಾಕಿಸ್ತಾನದ ಸಂಬಂಧದಲ್ಲಿನ ಬಿರುಕು ಹೆಚ್ಚಾಗುವ ವಾತಾವರಣ ನಿರ್ಮಾಣವಾಗಿದೆ. ಆದರೂ ಸಹ ಶ್ರೀನಗರ ಹಾಗೂ ಮುಜಾಫರಾಬಾದ್ ನಡುವಿನ ಬಸ್ ಸಂಚಾರ ಯಥಾಸ್ಥಿತಿಯಲ್ಲಿ...

ಶ್ರೀನಗರ: ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಪ್ರಧಾನ ಕಚೇರಿ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಭಾರತ- ಪಾಕಿಸ್ತಾನದ ಸಂಬಂಧದಲ್ಲಿನ ಬಿರುಕು ಹೆಚ್ಚಾಗುವ ವಾತಾವರಣ ನಿರ್ಮಾಣವಾಗಿದೆ. ಆದರೂ ಸಹ ಶ್ರೀನಗರ ಹಾಗೂ ಮುಜಾಫರಾಬಾದ್ ನಡುವಿನ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರೆದಿದೆ.
ಭಾನುವಾರ ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದರೂ, ಸೋಮವಾರ(ಸೆ.19 ರಂದು) ಶ್ರೀನಗರ- ಮುಜಾಫರಾಬಾದ್ ನಡುವೆ ಸಂಚರಿಸುವ ಬಸ್ ಸಂಚಾರ ಯಥಾಪ್ರಕಾರ ಮುಂದುವರೆದಿತ್ತು. ಭಯೋತ್ಪಾದಕರ ದಾಳಿ ಮುಂದುವರೆದಾ ಉಭಯ ರಾಷ್ಟ್ರಗಳ ನಡುವೆ ಸಂಚರಿಸುವ ಪ್ರಯಾಣಿಕರನ್ನು ಹೊತ್ತು ಸಾಗುವ ಬಸ್ ಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕರ ದಾಳಿ ನಡೆದ ಮೇಲೂ ಅಲ್ಲಿ ಸಂಚರಿಸಲು ಮುಜಾಫರಾಬಾದ್ (ಪಾಕ್ ಆಕ್ರಮಿತ ಕಾಶ್ಮೀರ) ಹಾಗೂ ಶ್ರೀನಗರದ ನಡುವೆ ಸಂಚರುವ ಬಸ್ ಗೆ ಮಾತ್ರ ಅನುಮತಿ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


