ದೇಶ

ದಿವ್ಯಾಂಗ, ಬುಡಕಟ್ಟು ಜನರೊಂದಿಗೆ ಜನ್ಮದಿನವನ್ನು ಆಚರಿಸಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ತಮ್ಮ 66 ನೇ ಜನ್ಮದಿನವನ್ನು ಗುಜರಾತ್ ನಲ್ಲಿ ದಿವ್ಯಾಂಗರು ಹಾಗೂ ಬುಡಕಟ್ಟು ಜನರೊಂದಿಗೆ ಆಚರಿಸಲು ನಿರ್ಧರಿಸಿದ್ದಾರೆ.

ದಿವ್ಯಾಂಗ, ಬುಡಕಟ್ಟು ಜನರೊಂದಿಗೆ ಜನ್ಮದಿನವನ್ನು ಆಚರಿಸಲಿರುವ ಪ್ರಧಾನಿ ಮೋದಿ
ನರೇಂದ್ರ ಮೋದಿ
Published On :

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮ 66 ನೇ ಜನ್ಮದಿನವನ್ನು ಗುಜರಾತ್ ನಲ್ಲಿ ದಿವ್ಯಾಂಗರು ಹಾಗೂ ಬುಡಕಟ್ಟು ಜನರೊಂದಿಗೆ ಆಚರಿಸಲು ನಿರ್ಧರಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯ ಸೆ.17 ರಂದು ಜನ್ಮದಿನದ ಅಂಗವಾಗಿ ಗುಜರಾತ್ ನ ಗಾಂಧಿ ನಗರಕ್ಕೆ ತೆರಳಿ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆಯಲಿರುವ ಪ್ರಧಾನಿ ನರೇಂದ್ರ ಮೋದಿ, ನಂತರ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ನಂತರ  ಬುಡಕಟ್ಟು ಜನರು ಹಾಗೂ ದಿವ್ಯಾಂಗರ ಜೊತೆಯಲ್ಲಿ ಒಂದಷ್ಟು ಸಮಯ ಕಳೆಯಲಿದ್ದಾರೆ ಎಂದು ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ ತಿಳಿಸಿದ್ದಾರೆ.
ದಾಹೋದ್ ಜಿಲ್ಲೆಯಲ್ಲಿ ಉದ್ಘಾಟನೆಯಾಗಲಿರುವ ನೀರಾವರಿ ಯೋಜನೆಯಿಂದಾಗಿ ಜಿಲ್ಲೆಯ ಕುಗ್ರಾಮಗಳಿಗೂ ಸಹ ನೀರು ಸಿಗಲಿದೆ ಎಂದು ಜಿಲ್ಲಾಧಿಕಾರಿ ಲಲಿತ್ ಪಡಾಲಿಯಾ ಹೇಳಿದ್ದಾರೆ. ನೀರಾವರಿ ಯೋಜನೆಯನ್ನು ಉದ್ಘಾಟಿಸಿದ ಬಳಿಕ ನವಸರಿ ನಗರದಲ್ಲಿರುವ ದಿವ್ಯಾಂಗ ಜನರಿಗೆ ಸಹಾಯಕವಾಗುವ ಸಾಮಗ್ರಿಗಳನ್ನು ವಿತರಿಸಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.