ದೇಶ

ಕಾಶ್ಮೀರ ಹಿಂಸಾಚಾರ: ಈದ್ ಸಂಭ್ರಮದ ನಡುವೆಯೂ 66ನೇ ದಿನಕ್ಕೆ ಕಾಲಿಟ್ಟ ಬಂದ್ ಆಚರಣೆ

ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾಶ್ಮೀರದಲ್ಲಿ ಬಂದ್ ಆಚರಣೆ 66ನೇ ದಿನಕ್ಕೆ ಕಾಲಿಟ್ಟಿದೆ...

ಕಾಶ್ಮೀರ ಹಿಂಸಾಚಾರ: ಈದ್ ಸಂಭ್ರಮದ ನಡುವೆಯೂ 66ನೇ ದಿನಕ್ಕೆ ಕಾಲಿಟ್ಟ ಬಂದ್ ಆಚರಣೆ
ಕಾಶ್ಮೀರದಲ್ಲಿ 15 ದಿನದ ಹಿಂಸಾಚಾರ ಸಂದರ್ಭದಲ್ಲಿ ರಸ್ತೆಗಳಲ್ಲಿ ಗಸ್ತು ತಿರುಗುತ್ತಿರುವ ಭದ್ರತಾ ಸಿಬ್ಬಂದಿಗಳು
Published On :

ಶ್ರೀನಗರ: ಪವಿತ್ರ ಹಬ್ಬ ಈದ್ ಮಿಲಾದ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಕಾಶ್ಮೀರದಲ್ಲಿ ಬಂದ್ ಆಚರಣೆ 66ನೇ ದಿನಕ್ಕೆ ಕಾಲಿಟ್ಟಿದೆ.

ಶ್ರೀನಗರ ಮತ್ತು ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲಾಗುತ್ತಿದ್ದು, ಈಗಾಗಲೇ ಅನಂತ್ನಾಗ್, ಕುಲ್ಗಾಮ್, ಶೋಪಿಯಾನ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ.

ಈದ್ ಮಿಲಾದ್ ಹಬ್ಬದ ನಡುವೆಯೂ ಕಾಶ್ಮೀರದಲ್ಲಿ ಬಂದ್ ಆಚರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂದ್ ಪರಿಣಾಮ ಕಾಶ್ಮೀರದಲ್ಲಿ ಅಂಗಡಿ ಮುಗ್ಗಟ್ಟುಗಳು, ಬೇಕರಿಗಳು, ಮಾಂಸದ ಅಂಗಡಿ, ಶೈಕ್ಷಣಿಕ ಕ್ಷೇತ್ರಗಳು, ಮಾರುಕಟ್ಟೆ, ಸಾರ್ವಜನಿಕ ಸಾರಿಗೆ ಹಾಗೂ ಇನ್ನಿತರೆ ವ್ಯಾವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈ ಬಾರಿಯ ಈದ್ ಸಂಭ್ರಮಕ್ಕೆ ಮಂಕು ಕವಿಯುವ ಸಾಧ್ಯತೆಗಳು ಹೆಚ್ಚಾದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.