ದೇಶ

ಶಾಸಕರ ಸಮ್ಮುಖದಲ್ಲೇ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಥಳಿಸಿದ ಯುವತಿ

ಎನ್ಸಿಪಿ ಶಾಸಕ ಜಿತೇಂದ್ರ ಅವಾದ್ ಸಮ್ಮುಖದಲ್ಲೇ ತನಗೆ ಲೈಂಗಿಕ ಕಿರುಕಳ ನೀಡಿದ ವ್ಯಕ್ತಿಗೆ ಸಂತ್ರಸ್ತ ಯುವತಿ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ...

ಶಾಸಕರ ಸಮ್ಮುಖದಲ್ಲೇ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಥಳಿಸಿದ ಯುವತಿ
ವ್ಯಕ್ತಿಗೆ ಥಳಿಸಿದ ಯುವತಿ
Published On :
ಥಾಣೆ: ಎನ್ಸಿಪಿ ಶಾಸಕ ಜಿತೇಂದ್ರ ಅವಾದ್ ಸಮ್ಮುಖದಲ್ಲೇ ತನಗೆ ಲೈಂಗಿಕ ಕಿರುಕಳ ನೀಡಿದ ವ್ಯಕ್ತಿಗೆ ಸಂತ್ರಸ್ತ ಯುವತಿ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಇನ್ನು ಸಂತ್ರಸ್ತ ಯುವತಿ ಮತ್ತು ಆರೋಪಿಯನ್ನು ಕಚೇರಿಗೆ ಕರೆಸಿ ರಾಜಿ ಪಂಚಾಯಿತಿಗೆ ಮುಂದಾಗಿದ್ದ ಶಾಸಕರ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. 
ಕಾಲೇಜು ವಿದ್ಯಾರ್ಥಿಯಾಗಿರುವ ಆರೋಪಿ ಸಂತ್ರಸ್ತ ಯುವತಿಗೆ ಸತತ ಕಿರುಕುಳ ನೀಡುತ್ತಾ ಬಂದಿದ್ದ. ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ ಈ ಮಧ್ಯೆ ಯುವತಿಯನ್ನು ಮತ್ತು ಆರೋಪಿಯನ್ನು ಶಾಸಕರು ತಮ್ಮ ಕಚೇರಿಗೆ ಕರೆಸಿ ಕಾನೂನು ನಿಯಮಾವಳಿಗಳನ್ನು ಮೀರಿ ಪ್ರಕರಣದಲ್ಲಿ ನ್ಯಾಯ ತೀರ್ಮಾನಕ್ಕೆ ಮುಂದಾಗಿದ್ದರು. 
ಯುವತಿ ಮತ್ತು ಶಾಸಕರ ಕೆಲ ಬೆಂಬಲಿಗರು ಆರೋಪಿಗೆ ಥಳಿಸಿರುವ ದೃಶ್ಯಾವಳಿಗಳು ವಿಡಿಯೋದಲ್ಲಿದೆ. ಇನ್ನು ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354(ಎ),(ಬಿ) ಮತ್ತು 506 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 12ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.