ದೇಶ

ಕಾವೇರಿಗಾಗಿ ಗೋಗರೆಯುವುದು ಬಿಡಿ; ಸಮುದ್ರದ ನೀರು ಬಳಸಿಕೊಳ್ಳಿ: ತ.ನಾಡಿಗೆ ಸ್ವಾಮಿ ಚಾಟಿ

ಕಾವೇರಿ ನೀರಿಗಾಗಿ ಪದೇ ಪದೇ ಕರ್ನಾಟಕದೊಂದಿಗೆ ಕದನಕ್ಕಿಳಿಯುತ್ತಿರುವ ತಮಿಳುನಾಡಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಛಾಟಿ ಬೀಸಿದ್ದು, ಪದೇ ಪದೇ ನೀರಿಗಾಗಿ ಗೋಗರೆಯುವ ಬದಲು ಸಮುದ್ರದ ನೀರನ್ನೇ ಶುದ್ದೀಕರಿಸಿಕೊಂಡು ಬಳಕೆ ಮಾಡುವಂತೆ ಹೇಳಿದ್ದಾರೆ.

ಕಾವೇರಿಗಾಗಿ ಗೋಗರೆಯುವುದು ಬಿಡಿ; ಸಮುದ್ರದ ನೀರು ಬಳಸಿಕೊಳ್ಳಿ: ತ.ನಾಡಿಗೆ ಸ್ವಾಮಿ ಚಾಟಿ
ಸುಬ್ರಮಣಿಯನ್ ಸ್ವಾಮಿ ಮತ್ತು ಜಯಲಲಿತಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಕಾವೇರಿ ನೀರಿಗಾಗಿ ಪದೇ ಪದೇ ಕರ್ನಾಟಕದೊಂದಿಗೆ ಕದನಕ್ಕಿಳಿಯುತ್ತಿರುವ ತಮಿಳುನಾಡಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಚಾಟಿ ಬೀಸಿದ್ದು, ಪದೇ ಪದೇ ನೀರಿಗಾಗಿ  ಗೋಗರೆಯುವ ಬದಲು ಸಮುದ್ರದ ನೀರನ್ನೇ ಶುದ್ದೀಕರಿಸಿಕೊಂಡು ಬಳಕೆ ಮಾಡುವಂತೆ ಹೇಳಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕಳೆದೊಂದು ವಾರದಿಂದ ಉಭಯ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಆಧಾರದ ಮೇಲೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ  ಸುಬ್ರಮಣಿಯನ್ ಸ್ವಾಮಿ, ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸರ್ಕಾರ ಕರ್ನಾಟಕವನ್ನು ಗೋಗರೆಯುವುದನ್ನು ಬಿಡಬೇಕು. ಬದಲಿಗೆ ಸಮುದ್ರದ ನೀರನ್ನೇ ಶುದ್ದೀಕರಿಸಿಕೊಂಡು  ಕುಡಿಯಲು ಹಾಗೂ ನೀರಾವರಿಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇನ್ನು ಸುಬ್ರಮಣಿಯನ್ ಸ್ವಾಮಿ ಅವರ ಈ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸಮುದ್ರದ ನೀರನ್ನು ಬಳಸಿಕೊಳ್ಳುವ ತಂತ್ರಜ್ಞಾನ ಭಾರತದಲ್ಲಿ ಚಾಲ್ತಿಯಲ್ಲಿದ್ದರೂ ಅದರ ಸಮರ್ಪಕ  ಬಳಕೆಗೆ ಮಾತ್ರ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟ್ವೀಟಿಗರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.