ರಾಜಸ್ಥಾನ ರಾಯಲ್ ಹೋರಾಟ ಅಂತ್ಯ, ರಾಜಮಹಲ್ ಅರಮನೆ ಗೇಟ್ ತೆರೆಯಲು ಆದೇಶ
ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ರಾಜಮಹಲ್ ಅರಮನೆಯ ಮುಖ್ಯ ದ್ವಾರವನ್ನು ಭಾನುವಾರ ಪುನಾ ತೆರೆದಿದ್ದು,....

Published On :
ಜೈಪುರ: ಜೈಪುರ ಅಭಿವೃದ್ಧಿ ಪ್ರಾಧಿಕಾರ(ಜೆಡಿಎ) ರಾಜಮಹಲ್ ಅರಮನೆಯ ಮುಖ್ಯ ದ್ವಾರವನ್ನು ಭಾನುವಾರ ಪುನಾ ತೆರೆದಿದ್ದು, ಈ ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ರಾಜಮನೆತನದ ಹೋರಾಟಕ್ಕೆ ತೆರೆ ಬಿದ್ದಿದೆ.
ನಿನ್ನೆ ರಾತ್ರಿ ರಾಜಮಾತೆ ಪದ್ಮಿನಿ ದೇವಿ ಅವರು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಭೇಟಿ ಮಾಡಿದ ಚರ್ಚಿಸದ್ದರು. ನಂತರ ವಸುಂಧರಾ ರಾಜೆ ಅವರು ಅರಮನೆ ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ಸಚಿವರ ಸಮಿತಿಯೊಂದರನ್ನು ರಚಿಸಿದ್ದರು.
ಸಚಿವರ ಸಮಿತಿ ರಾಜಮಹಲ್ ಗೇಟ್ ಅನ್ನು ಪುನಾ ಆರಂಭಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಜೆಡಿಎ ಇಂದು ಗೇಟ್ ತೆರೆದಿದೆ.
ಕಳೆದ ಗುರುವಾರ ರಾಜಮಾತೆ ಪದ್ಮಿನಿ ದೇವಿ ಅವರು ಸಾವಿರಾರು ಬೆಂಬಲಿಗರೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಪದ್ಮಿನಿ ದೇವಿ ಅವರು, ಜೆಡಿಎ ಅಧಿಕಾರಿಗಳು ಅರಮನೆಯ ಮುಖ್ಯ ದ್ವಾರವನ್ನು ಬಂದ್ ಮಾಡುವ ರಾಜಮನೆತನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದರು. ಮುಖ್ಯ ದ್ವಾರ ತನ್ನ ಜಾಗದಲ್ಲಿದೆ ಎಂದು ಕಳೆದ ವಾರ ಜೆಡಿಎ ಅದನ್ನು ಬಂದ್ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


