ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ನಿಯೋಜನೆ ಹೇಳಿಕೆಗೆ ಚೀನಾ ಪ್ರತಿತಂತ್ರ: ಟಿಬೆಟ್ ನಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನಿಯೋಜನೆ
ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಬೀಜಿಂಗ್ ಗೆ ತೆರಳುತ್ತಿರುವ ಸಂದರ್ಭದಲ್ಲೇ ಚೀನಾ ಟಿಬೆಟ್ ನ ಪ್ರದೇಶದಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನ್ನು ನಿಯೋಜನೆ...

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಬೀಜಿಂಗ್ ಗೆ ತೆರಳುತ್ತಿರುವ ಸಂದರ್ಭದಲ್ಲೇ ಚೀನಾ ಟಿಬೆಟ್ ನ ಪ್ರದೇಶದಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನ್ನು ನಿಯೋಜನೆ ಮಾಡಿರುವ ಚಿತ್ರಗಳು ಟ್ವಿಟರ್ ನಲ್ಲಿ ಕಂಡುಬಂದಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜನೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಚೀನಾ ಟಿಬೆಟ್ ನಲ್ಲಿ ಸ್ಟೆಲ್ತ್ ಫೈಟರ್ ಜೆಟ್ ನಿಯೋಜನೆ ಮಾಡಿರುವುದು ಗಮನಾರ್ಹ ವಿಷಯವಾಗಿದೆ. ಚೀನಾ ಸ್ಟೆಲ್ತ್ ಜೆಟ್ ನಿಯೋಜನೆ ಮಾಡಿರುವ ಚಿತ್ರ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಡಿಫೆನ್ಸ್ ವೆಬ್ ಸೈಟ್ ಗಳಲ್ಲಿ ಸುದ್ದಿ ಪ್ರಕಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಯೆಟ್ನಾಂ ಪ್ರವಾಸದ ನಂತರ ಚೀನಾ ಗೆ ಭೇಟಿ ನೀಡಲಿದ್ದು ಇದೆ ಸಂದರ್ಭದಲ್ಲಿ ಟಿಬೆಟ್ ನಲ್ಲಿ ಚೀನಾ ಸ್ಟೆಲ್ತ್ ಜೆಟ್ ನಿಯೋಜನೆ ಮಾಡಿದೆ. ಇನ್ನು ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿ ನಿಯೋಜನೆ ಮಾಡಿರುವುದಕ್ಕೆ ಚೀನಾ ಆತಂಕವನ್ನು ತಳ್ಳಿಹಾಕಿರುವ ಭಾರತೀಯ ಸೇನೆ, ನಮ್ಮ ಆತಂಕ ಹಾಗೂ ಭದ್ರತಾ ವಿಷಯಗಳು ಆಂತರಿಕ ವಿಚಾರವಾಗಿದ್ದು, ಇದಕ್ಕಾಗಿ ಕೈಗೊಳ್ಳುವ ಕ್ರಮಗಳಿಂದ ಬೇರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


