ವಾರಣಾಸಿ: ವೀರ ಯೋಧರಿಗಾಗಿ ವಿಶೇಷ ಗಂಗಾ ಆರತಿ ಮಾಡಿದ ಜನತೆ
ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ಪ್ರಾಣವನ್ನೇ ಪಣಕ್ಕಿಟ್ಟು ದೇಶ ಕಾಯುವ ಯೋಧರಿಗಾಗಿ ನಿನ್ನೆ ವಾರಣಾಸಿಯಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು...

ವಾರಣಾಸಿ: ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದ್ದು, ಪ್ರಾಣವನ್ನೇ ಪಣಕ್ಕಿಟ್ಟು ದೇಶ ಕಾಯುವ ಯೋಧರಿಗಾಗಿ ನಿನ್ನೆ ವಾರಣಾಸಿಯಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು ಮಾಡಲಾಯಿತು.
ಭಾರತದ ಆಧ್ಯಾತ್ಮಿಕ ರಾಜಧಾನಿ ಎಂದೇ ಹೇಳಲಾಗುವ ವಾರಣಾಸಿಯಲ್ಲಿ ನಿನ್ನೆ ವಿಶೇಷ ಗಂಗಾ ಆರತಿ ಪೂಜೆಯನ್ನು ಸಲ್ಲಿಸಲಾಯಿತು. ಪೂಜೆ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಅಲ್ಲದೆ, ವಿಶೇಷವಾಗಿ ಯೋಧರಿಗಾಗಿ ರಂಗೋಲಿಯನ್ನು ಬಿಡಿಸಿ, ದೀಪಗಳಲ್ಲಿಯೇ ಜೈ ಜವಾನ್, ಜೈ ಕಿಸಾನ್ ಎಂದು ಅಲಂಕರಿಸಿರುವುದು ಎಲ್ಲರ ಕಣ್ಮನಗಳನ್ನು ಸೆಳೆದಿತ್ತು.
ಕೇವಲ ವಾರಣಾಸಿಯಲ್ಲಿ ಅಷ್ಟೇ ಅಲ್ಲದೆ, ದೇಶದ ವಿವಿಧ ಪ್ರದೇಶಗಳಲ್ಲಿಯೂ ಯೋಧರಿಗಾಗಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಕೊಂಡಾಡಿದ್ದರೂ. ದೀಪಾವಳಿ ಹಬ್ಬವನ್ನು ವೀರ ಯೋಧರಿಗೆ ಸಮರ್ಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


