ವಾಘಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ವಿವಿಧ ಧಾರ್ಮಿಕ ಮುಖಂಡರು
ವಾಘಾ ಗಡಿಗೆ ಭೇಟಿ ನೀಡಿದ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಭಾರತೀಯ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ...

Published On :
ಅಮೃತಸರ್: ವಾಘಾ ಗಡಿಗೆ ಭೇಟಿ ನೀಡಿದ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರು ಭಾರತೀಯ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ.
ಗಡಿಯಲ್ಲಿ ನಿಂತು ದೇಶಕ್ಕೆ ರಕ್ಷಣೆ ಮಾಡುತ್ತಿರುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಧಾರ್ಮಿಕ ಮುಖಂಡರು ಯೋಧರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದ್ದಾರೆ. ರಿಶಿಕೇಶದ ಪರ್ಮಾರ್ಥ ನಿಕೇತನ್ ಆಶ್ರಮದ ಸ್ವಾಮಿ ಚಿದಾನಂದ ಸರಸ್ವತಿ, ಅಹಿಂಸಾ ವಿಶ್ವಭಾರ್ತಿ ಆಶ್ರಮದ ಲೋಕೇಶ್ ಮುನಿ, ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್ ಮುಖಂಡ ಇಮಾಮ್ ಉಮರ್ ಮಹ್ಮದ್ ಹಾಗೂ ಗೋಲ್ಡನ್ ಟೆಂಪಲ್ ನ ಸಂತ ಗ್ಯಾನಿ ಗುರ್ಬಚನ್ ಸಿಂಗ್ ಸೇರಿದಂತೆ ಧಾರ್ಮಿಕ ಮುಖಂಡರು ವಾಘಾ ಗಡಿಗೆ ತೆರಳಿ ದೀಪಾವಳಿ ಆಚರಿಸಿದರು.
ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಧಾರ್ಮಿಕ ಮುಖಂಡರು ರಾಷ್ಟ್ರೀಯ ಸಮಗ್ರತೆ, ಏಕತೆ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಬಂಧು ಬಳಗವನ್ನು ಬಿಟ್ಟು ಹಬ್ಬದ ಸಮಯದಲ್ಲೂ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹಬ್ಬದ ಶುಭಾಶಯ ಕೋರಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಈ ಆಂದೋಲನಕ್ಕೆ ಬೆಂಬಲ ಸೂಚಕವಾಗಿ ಧಾರ್ಮಿಕರು ಮುಖಂಡರು ವಾಘಾ ಗಡಿಗೆ ತೆರಳಿ ಬೆಳಕಿನ ಹಬಬ್ ಆಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದೀಪಾವಳಿಯೋಧರುಸಂಭ್ರಮcelebratesoldiersDiwaliReligious Leadersಧಾರ್ಮಿಕ ಮುಖಂಡರುAttari-Wagah Borderಅಟರಿ ವಾಘಾ ಗಡಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


