ಫೋನಿನಲ್ಲಿ ಪರ ಪುರುಷನ ಜತೆ ಆತ್ಮೀಯವಾಗಿ ಮಾತನಾಡಿದ ಪತ್ನಿಯನ್ನು ಇರಿದು ಕೊಂದ ಪತಿ
ಫೋನಿನಲ್ಲಿ ಪರ ಪುರುಷನ ಜತೆ ಆತ್ಮೀಯವಾಗಿ ಮಾತನಾಡಿದ ಪತ್ನಿಯನ್ನು 60 ವರ್ಷದ ಪತಿ ಚೂರಿಯಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾರೆ...

Published On :
ನವದೆಹಲಿ: ಫೋನಿನಲ್ಲಿ ಪರ ಪುರುಷನ ಜತೆ ಆತ್ಮೀಯವಾಗಿ ಮಾತನಾಡಿದ ಪತ್ನಿಯನ್ನು 60 ವರ್ಷದ ಪತಿ ಚೂರಿಯಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಪಶ್ಚಿಮ ದೆಹಲಿಯ ಹರಿ ನಗರ್ ನಲ್ಲಿ ದಂಪತಿಗಳು ವಾಸವಾಗಿದ್ದು, ಆನಂದ್ ನಿಕೇತನ್ ಪ್ರದೇಶದಲ್ಲಿ 58 ವರ್ಷದ ಮೃತ ಮಂಜು ಮೋಂಗಾ ಅವರು ಬಾಟಿಕ್ ಶಾಪ್ ನಡೆಸುತ್ತಿದ್ದರು. ಮನೆಯ ನಿರ್ವಹಣೆಯನ್ನು ಮಂಜು ಮೋಂಗಾ ಅವರೇ ನೋಡಿಕೊಳ್ಳುತ್ತಿದ್ದರು. ಪತಿ ಮೋಂಗಾ ಸಹೋದರಿಯ ಸಂಗೀತ ಶಾಲೆಯಲ್ಲಿ ಗಿಟಾರ್ ಕಲಿಸುತ್ತಿದ್ದರು. ಆದಾಯ ಬೇರೆ ಕಡಿಮೆ ಇತ್ತು. ಬಂದ ಹಣವನ್ನೆಲ್ಲಾ ಕುಡಿದು ಮೋಂಗಾ ಕಳೆಯುತ್ತಿದ್ದರು.
ಬುಧವಾರ ದಿಢೀರ್ ಮನೆಗೆ ಬಂದ ಮೋಂಗಾ ಪತ್ನಿಯನ್ನು ಬಾಟಿಕ್ ಶಾಪ್ ಗೆ ಡ್ರಾಪ್ ಮಾಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಮಂಜು ಮೋಂಗಾಗೆ ಕರೆ ಬಂದಿದ್ದು ಕರೆ ಮಾಡಿದವನ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಬಳಿಕ ಕರೆ ಮಾಡಿದ್ದು ಯಾರು ಎಂದು ಪತ್ನಿಯನ್ನು ಮೋಂಗಾ ಕೇಳಿದ್ದು ಇದಕ್ಕೆ ಮಂಜು ಸರಿಯಾಗಿ ಉತ್ತರ ನೀಡದಿದ್ದಾಗ ವ್ಯಗ್ರಗೊಂಡು ಕಾರಿನಲ್ಲಿದ್ದ ಚೂರಿಯನ್ನು ತೆಗೆದು ಪತ್ನಿಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದಾಗ ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


