ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ವೈಎಸ್ ಜಗನ್ ಮೋಹನ್
ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು...

Published On :
ಹೈದರಾಬಾದ್: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು ಪಂಕ್ಚರ್ ಆಗಿ ತನ್ನ ದಿಕ್ಕು ಬದಲಿಸಿ ಪೊದೆಗೆ ಹೋಗಿ ಗುದ್ದಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲಿನಿಂದ ಹೈದರಾಬಾದಿಗೆ ಬರುತ್ತಿದ್ದಾಗ ಜಗನ್ ಮತ್ತವರ ಬೆಂಬಲಿಗರು ಕಾರಿನಲ್ಲಿ ಶಂಶಬಾದ್ ಮಂಡಲ್ ನಲ್ಲಿನ ಪಲಮಕುಲ ತಲುಪಿದ್ದರು. ಆಗ ಕಾರಿನ ಒಂದು ಚಕ್ರ ಪಂಕ್ಚರ್ ಆಯಿತು. ಚಾಲಕ ಕೂಡಲೇ ಬ್ರೇಕ್ ಹಾಕಿದರು. ಆಗ ಕಾರು ರಸ್ತೆ ಬಿಟ್ಟು ಬದಿಯ ಪೊದೆಗೆ ಹೋಗಿ ಗುದ್ದಿತು.
ಚಾಲಕರ ಸಮಯ ಪ್ರಜ್ಞೆಯಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಗನ್ ಮೋಹನ್ ಅವರು ಕೂದಳೆಲೆ ಅಂತರದಲ್ಲಿ ಅಪಘಾತದಿಂದ ಪಾರಾಗುವುದು ಇದು ಎರಡನೇ ಸಲ. ಈ ಮೊದಲು ಆಂಧ್ರದ ಪ್ರಕಾಶಂ ಜಿಲ್ಲೆಗೆ ಹೋಗುತ್ತಿದ್ದಾಗ ಜಗನ್ ಅವರ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಆಗಲೂ ಜಗನ್ ಅವರು ಯಾವುದೇ ಗಾಯಗಳಾಗದೆ ಬಚಾವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


