ಗರ್ಭಿಣಿ ನಾಯಿಯನ್ನು ಕೊಂದು, ಶವದ ಜೊತೆ ಅಸಹಜ ಲೈಂಗಿಕ ಕ್ರಿಯೆ: ಯುವಕನ ಬಂಧನ
ಕಾಮುಕನೋರ್ವ ಗರ್ಭಿಣಿ ನಾಯಿಯನ್ನು ಕೊಂದು ಅದರ ಶವದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿಯಾಗಿರುವ ವಿಕೃತ ಘಟನೆ ...

ಹೈದರಾಬಾದ್: ಕಾಮುಕನೋರ್ವ ಗರ್ಭಿಣಿ ನಾಯಿಯನ್ನು ಕೊಂದು ಅದರ ಶವದೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿಯಾಗಿರುವ ವಿಕೃತ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ನೇಪಾಳ ಮೂಲದ ಆಸ್ಲಾಂ ಖಾನ್ ಅಲಿಯಾಸ್ ಸುಭಾಶ್ ಬಂಧಿತ ಆರೋಪಿ, ಎರಡು ದಿನಗಳ ಹಿಂದೆ ತನ್ನ ಸ್ನೇಹಿತರನ್ನು ನೋಡಲು ಹೈದರಾಬಾದ್‌ಗೆ ಆಗಮಿಸಿದ್ದ.
ಈ ವೇಳೆ ಶಾಸ್ತ್ರಿ ನಗರದ ಜಹಾಂಗೀರ್ ಎಂಬುವರು ಸಾಕಿದ್ದ ನಾಯಿಯನ್ನು ಕತ್ತು ಹಿಸಕಿ ಕೊಂದ ಆರೋಪಿ ಪೊದೆಗೆ ಎಳೆದೊಯ್ದಿದ್ದಾನೆ, ನಿರ್ಮಾಣ ಹಂತದ ಕಟ್ಟಡಕ್ಕೆ ನೀರು ಹಾಕುತ್ತಿದ್ದ ಜಹಾಂಗಿರ್, ಆರೋಪಿ ನಾಯಿಯನ್ನ ಪೊದೆಗೆ ಎಳೆದು ಕೊಂಡು ಹೋಗಿದ್ದನ್ನು ನೋಡಿ ತನ್ನ ಮಕ್ಕಳಿಗೆ ವಿಷಯ ತಿಳಿಸಿದ್ದಾನೆ. ಪೊದೆಯ ಬಳಿ ಬಂದ ಜಹಾಂಗೀರ್ ಮಕ್ಕಳು, ಅಸ್ಲಾಂ ಖಾನ್ ಶತ್ತ ನಾಯಿಯ ಶವದೊಡನೆ ಅಸಹಜ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆತನಿಗೆ ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


