ದೇಶ

"ದೇಶಕ್ಕಾಗಿ ನಾನು ಸತ್ತರೆ ನೀನು ಅಳಬೇಡ ಎಂದು ಹೇಳಿದ್ದ, ಹೀಗಾಗಿ ನಾನು ಅಳಲ್ಲ"

ದೇಶಕ್ಕಾಗಿ ನಾನು ಸತ್ತರೆ ಅಳಬೇಡ ಎಂದು ನನ್ನ ಮಗ ಹೇಳಿದ್ದ, ಹೀಗಾಗಿ ನಾನು ಅಳುವುದಿಲ್ಲ ಇದು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿರುವ ಗುರ್ನಾಮ್ ಸಿಂಗ್ ಅವರ ತಾಯಿ ಆಡಿದ ಮಾತುಗಳು...

"ದೇಶಕ್ಕಾಗಿ ನಾನು ಸತ್ತರೆ ನೀನು ಅಳಬೇಡ ಎಂದು ಹೇಳಿದ್ದ, ಹೀಗಾಗಿ ನಾನು ಅಳಲ್ಲ"
ಹುತಾತ್ಮ ಯೋಧ ಗುರ್ನಾಮ್ ಸಿಂಗ್
Published On :

ನವದೆಹಲಿ: ದೇಶಕ್ಕಾಗಿ ನಾನು ಸತ್ತರೆ ಅಳಬೇಡ ಎಂದು ನನ್ನ ಮಗ ಹೇಳಿದ್ದ, ಹೀಗಾಗಿ ನಾನು ಅಳುವುದಿಲ್ಲ ಇದು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿರುವ ಗುರ್ನಾಮ್ ಸಿಂಗ್ ಅವರ ತಾಯಿ ಆಡಿದ ಮಾತುಗಳು.

ಮಗನಿಗೆ ನೀಡಿದ್ದ ಮಾತನ್ನು ನೆನೆಯುತ್ತಿರುವ ಗುರ್ನಾಮ್ ಸಿಂಗ್ ಅವರ ತಾಯಿ, ಎದೆಯಲ್ಲಿ ಉಕ್ಕಿ ಬರುತ್ತಿರುವ ದುಃಖವನ್ನು ಬಚ್ಚಿಟ್ಟುಕೊಂಡು ಮಗನ ತ್ಯಾಗಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.  

ನಾನು ದೇಶಕ್ಕಾಗಿ ಸಾವನ್ನಪ್ಪಿದರೆ, ಅಳಬೇಡ ಎಂದು ಹೇಳಿದ್ದ. ಹೀಗಾಗಿ ನಾನು ಅಳುವುದಿಲ್ಲ. ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಯೋಧರ ಬಗ್ಗೆ ನಾನು ಹೆಮ್ಮೆಪಡುತ್ತೇನೆಂದು ಹೇಳಿದ್ದಾರೆ.

ಗುರ್ನಾಮ್ ಸಿಂಗ್ ಅವರ ತಂದೆ ಕುಲ್ಬೀರ್ ಸಿಂಗ್ ಅವರು ಮಾತನಾಡಿ, ಬಕ್ಷಿ ನಗರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಿಎಸ್ಎಫ್ ಯೋಧರೇ ಸ್ವಂತ ಆಸ್ಪತ್ರೆಯನ್ನು ಹೊಂದಿದ್ದರೆ, ಇಂದು ನನ್ನ ಮಗ ಜೀವಂತವಾಗಿರುತ್ತಿದ್ದ. ಯೋಧರಿಗೆ ಉತ್ತಮ ಆಸ್ಪತ್ರೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಈ ಮೂಲಕ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.