ದೇಶ

ದಾಳಿ ನಡೆಸುತ್ತಿರುವ ಪಾಕ್ ಸೇನೆಗೆ ಭಾರತೀಯ ಯೋಧರಿಂದ ದಿಟ್ಟ ಉತ್ತರ: ಐಜಿ ಡಿ.ಕೆ. ಉಪಾಧ್ಯಾಯ್

ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾನಗರ್ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು...

ದಾಳಿ ನಡೆಸುತ್ತಿರುವ ಪಾಕ್ ಸೇನೆಗೆ ಭಾರತೀಯ ಯೋಧರಿಂದ ದಿಟ್ಟ ಉತ್ತರ: ಐಜಿ ಡಿ.ಕೆ. ಉಪಾಧ್ಯಾಯ್
ಗಡಿ ಭದ್ರತಾ ಸೇನೆಯ ಇನ್ಸ್ ಪೆಕ್ಟರ್ ಜನರಲ್ ಡಿ.ಕೆ. ಉಪಾಧ್ಯಾಯ್
Published On :

ಹೀರಾನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹೀರಾನಗರ್ ಸೆಕ್ಟರ್ ಬಳಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಗಡಿ ಭದ್ರತಾ ಸೇನೆಯ ಇನ್ಸ್ ಪೆಕ್ಟರ್ ಜನರಲ್ ಡಿ.ಕೆ. ಉಪಾಧ್ಯಾಯ್ ಅವರು ಹೇಳಿದ್ದಾರೆ.

ಗಡಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ನಿನ್ನೆ ರಾತ್ರಿ ಕೂಡ ಕಥುವಾ ಜಿಲ್ಲೆಯ ಗಡಿಯಲ್ಲೂ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ. ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದ್ದು, ಓರ್ವ ಉಗ್ರ ಸೇರಿದಂತೆ 7 ಮಂದಿ ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಉಪಾಧ್ಯಾಯ್ ಅವರು ಹೇಳಿದ್ದಾರೆ.

60ಎಂಎಂ, 82 ಎಂಎಂ ಮಾರ್ಟರ್, ಎಂಎಂಜಿಗಳು, ಎಲ್ಎಂಜಿಗಳು, ಎಕೆ-47ಗಳನ್ನು ಬಳಸಿ ಪಾಕಿಸ್ತಾನ ಸೇನೆ ಭಾರತೀಯ ಸೇನೆ ದಾಳಿ ನಡೆಸಿತ್ತು. ದಾಳಿ ವೇಳೆ ಪೇದೆ ಗುರ್ನಾಮ್ ಎಂಬುವವರಿಗೆ ಗಾಯವಾಗಿದೆ.

ಪಾಕಿಸ್ತಾನ ಸೇನೆ ಇದೇ ರೀತಿಯಾಗಿ ದಾಳಿ ನಡೆಸುತ್ತಲೇ ಇದ್ದರೆ, ಪ್ರತ್ಯುತ್ತರವನ್ನು ಹೇಗೆ ನೀಡಬೇಕೆಂಬುದು ಭಾರತೀಯ ಸೇನೆಗೆ ತಿಳಿಸಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.