ಎಂಬ್ರೇಯರ್ ಯುದ್ಧ ವಿಮಾನ ಒಪ್ಪಂದ: ರಕ್ಷಣಾ ಸಲಹೆಗಾರ ವಿಪಿನ್ ಖನ್ನಾ ವಿರುದ್ಧ ಎಫ್ ಐಆರ್ ದಾಖಲು
ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ತನಿಖಾ ದಳ 208 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ...

Published On :
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ತನಿಖಾ ದಳ 208 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಎಂಬ್ರೇಯರ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಫ್ ಐಆರ್ ದಾಖಲಿಸಿದೆ. ಅಲ್ಲದೆ ತನಿಖಾ ಸಂಸ್ಥೆ, ರಕ್ಷಣಾ ಸಲಹೆಗಾರ ಅನಿವಾಸಿ ಭಾರತೀಯ ವಿಪಿನ್ ಖನ್ನಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರು ಸೂಚಿಸಿದೆ.ಇಂಗ್ಲಿಷ್ ದೈನಿಕವೊಂದಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ, ಸಿಂಗಾಪೂರ್ ಮೂಲದ ಕಂಪೆನಿಯಾದ ಇಂಟರ್ ದೇವ್ ಪ್ರೈಲಿ ನಿಂದ ಖನ್ನಾ ಅವರಿಗೆ ಭಾರೀ ಮೊತ್ತ ಸಂದಾಯವಾಗಿದೆ ಎಂದು ಹೇಳಲಾಗುತ್ತಿದೆ.
ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಮೂಲಕ ಹಣ ಸಂದಾಯವಾಗಿದೆ. 2000ದಿಂದ ಸಾಫ್ಟ್ ವೇರ್ ಕಂಪೆನಿಯಾಗಿ ಇಂಟರ್ ದೇವ್ ಪ್ರೈ.ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಕ್ಷಣಾ ಇಲಾಖೆಗೆ 3 ಯುದ್ಧ ವಿಮಾನ ಎಂಬ್ರಿಯರ್-145 ಕಳುಹಿಸಲು ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಒಪ್ಪಂದದ ದಾಖಲೆ, ಷರತ್ತು ಪತ್ರಗಳನ್ನು ಸಿಬಿಐ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
2008ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಒಪ್ಪಂದ ನಡೆದಿತ್ತು ಎಂದು ಹೇಳಲಾಗುತ್ತಿದೆ. ಒಪ್ಪಂದದಲ್ಲಿ ಎಂಬ್ರಿಯರ್ ಮತ್ತು ಡಿಆರ್ ಡಿಒ ಮಧ್ಯೆ ಮೂರು ಯುದ್ಧ ವಿಮಾನ ಸಾಮಗ್ರಿ, ಸ್ವದೇಶಿ ರಾಡಾರ್ ಗಳ ಖರೀದಿಗೆ ಸಹಿ ಹಾಕಲಾಗಿತ್ತು. 208 ದಶಲಕ್ಷ ಡಾಲರ್ ಮೊತ್ತದ ಎಂಬ್ರಿಯರ್ ಯುದ್ಧ ವಿಮಾನ ಒಪ್ಪಂದದಲ್ಲಿ ಏನಾದರೂ ಮೋಸ ಪತ್ತೆಯಾದಲ್ಲಿ ಸಿಬಿಐ ತನಿಖೆ ನಡೆಸಬಹುದು ಎಂಬ ಸುಳಿವನ್ನು ಕಳೆದ ತಿಂಗಳು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೀಡಿದ್ದರು.
ಬ್ರೆಝಿಲ್ ನ ವಿಮಾನಯಾನ ಸಂಸ್ಥೆ ಎಂಬ್ರಿಯರ್ ಜೊತೆ ಒಪ್ಪಂದಕ್ಕೆ ಸಂಬಂಧಪಟ್ಟ ಭ್ರಷ್ಟಾಚಾರ ತನಿಖೆ ಹೊರಬಿದ್ದಿತ್ತು. ಈ ಒಪ್ಪಂದದ ಏಜೆಂಟ್ ಆಗಿ ಖನ್ನಾ ಅವರಿದ್ದು ಅವರು ಡಾಲರ್ 5.76 ದಶಲಕ್ಷ ಕಮಿಷನ್ ನ್ನು ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


