ದೇಶ

"ಅಖಿಲೇಶ್ ವಿರುದ್ಧ ಮಲತಾಯಿಯಿಂದಲೇ ಮಾಟ-ಮಂತ್ರ"

ಸಮಾಜವಾದಿ ಪಕ್ಷದ ಆಂತರಿಕ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚೆಗಷ್ಟೇ ಪಕ್ಷ ರಜತ ಮಹೋತ್ಸವಕ್ಕೆ ಗೈರಾಗುವ ನಿರ್ಧಾರ ಕೈಗೊಂಡಿದ್ದ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಅವರ ಮಲತಾಯಿಯೇ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

"ಅಖಿಲೇಶ್ ವಿರುದ್ಧ ಮಲತಾಯಿಯಿಂದಲೇ ಮಾಟ-ಮಂತ್ರ"
ಅಖಿಲೇಶ್ ಯಾದವ್ ಕುಟುಂಬ (ಸಂಗ್ರಹ ಚಿತ್ರ)
Published On :

ಲಖನೌ: ಸಮಾಜವಾದಿ ಪಕ್ಷದ ಆಂತರಿಕ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚೆಗಷ್ಟೇ ಪಕ್ಷ ರಜತ ಮಹೋತ್ಸವಕ್ಕೆ ಗೈರಾಗುವ ನಿರ್ಧಾರ ಕೈಗೊಂಡಿದ್ದ ಸಿಎಂ ಅಖಿಲೇಶ್  ಯಾದವ್ ವಿರುದ್ಧ ಅವರ ಮಲತಾಯಿಯೇ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಸ್ವತಃ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಹೇಳಿಕೊಂಡಿದ್ದು, ಸ್ವತಃ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರಿಗೆ ಶಾಸಕ ಉದಯ್ ವೀರ್ ಸಿಂಗ್  ಪತ್ರ ಬರೆದಿದ್ದಾರೆ.  ಪತ್ರದಲ್ಲಿ ಪಕ್ಷದ ವಿರುದ್ಧ ಅಖಿಲೇಶ್ ಯಾದವ್ ಅವರು ತಿರುಗಿ ಬೀಳಲು ಅವರ ಮಲತಾಯಿಯೇ ಕಾರಣ ಎಂದು ಅವರು ಆರೋಪಿಸಿದ್ದು, ಅಖಿಲೇಶ್ ವಿರುದ್ಧ ಮುಲಾಯಂ ಅವರ ಎರಡನೇ ಪತ್ನಿ  ಸಾಧನಾ ಅವರು ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂತೆಯೇ ಅಖಿಲೇಶ್ ಅವರ ಚಿಕ್ಕಪ್ಪ ಹಾಗೂ ಪಕ್ಷದ ರಾಜ್ಯ ಮುಖಂಡ ಶಿವಪಾಲ್ ಯಾದವ್ ಅವರಿಗೆ ಅಖಿಲೇಶ್ ಯಾದವ್ ಅವರ ಬೆಳವಣಿಗೆ ಕಂಡರೆ ಆಗುತ್ತಿಲ್ಲ. ಹೀಗಾಗಿ ಅಸೂಯೆಯಿಂದ  ಸಾಧನಾ ಹಾಗೂ ಶಿವಪಾಲ್ ಯಾದವ್ ಅವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಎಂದು ಉದಯ್ ವೀರ್ ಸಿಂಗ್ ಅವರು ಪತ್ರದಲ್ಲಿ ಆರೋಪಿಸಿದ್ದಾರೆ. ಇದೀಗ ಈ ಪತ್ರ ಮಾಧ್ಯಮಗಳಿಗೆ  ದೊರೆತಿದ್ದು, ವ್ಯಾಪಕ ಚರ್ಚೆಗೀಡಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.