ಕಾಶ್ಮೀರ ಹಿಂಸಾಚಾರ: ಅ.27ರವರೆಗೂ ಪ್ರತಿಭಟನೆ ಮುಂದೂಡಿದ ಪ್ರತ್ಯೇಕತಾವಾದಿಗಳು
ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ 100ಕ್ಕೂ ದಿನಗಳಿಗೆ ಕಾಲಿಟ್ಟಿದ್ದು, ಅಕ್ಟೋಬರ್ 27ರವರೆಗೂ ಪ್ರತಿಭಟನೆಯನ್ನು ಮುಂದುವರೆಸುವಂತೆ ಪ್ರತ್ಯೇಕತಾವಾದಿಗಳು ಗುರುವಾರ ಕರೆ...

ಶ್ರೀನಗರ: ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ 100ಕ್ಕೂ ದಿನಗಳಿಗೆ ಕಾಲಿಟ್ಟಿದ್ದು, ಅಕ್ಟೋಬರ್ 27ರವರೆಗೂ ಪ್ರತಿಭಟನೆಯನ್ನು ಮುಂದುವರೆಸುವಂತೆ ಪ್ರತ್ಯೇಕತಾವಾದಿಗಳು ಗುರುವಾರ ಕರೆ ನೀಡಿದ್ದಾರೆ.
ಪ್ರತಿಭಟನೆ ಕುರಿತಂತೆ ನಿನ್ನೆಯಷ್ಟೇ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಪ್ರತ್ಯೇಕತಾವಾದಿಗಳು, ಪ್ರತಿಭಟನೆಯನ್ನು ಅಕ್ಟೋಬರ್ 27ರವರೆಗೂ ಮುಂದೂಡಲಾಗಿದ್ದು, ಶುಕ್ರವಾರ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾಸಲಾಗಿದೆ.
ಅಲ್ಲದೆ, ಸೋಮವಾರ ಮತ್ತು ಮಂಗಳವಾರ ಹಲವು ಪ್ರದೇಶಗಳಲ್ಲಿ ರ್ಯಾಲಿಗಳನ್ನು ನಡೆಯಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಪ್ರತಿಭಟನಾ ದಿನದಂದೂ ಸಂಪೂರ್ಣವಾಗಿ ರಾಜ್ಯವನ್ನು ಬಂದ್ ಮಾಡಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.
ಸನತ್ ನಗರ, ಜವಾಹರ್ ನಗರ, ರಾಜ್ಭಾಗ್ ಮತ್ತು ಬಿಷ್ಮೆಂಬರ್ ನಗರ ಹಾಗೂ ಇನ್ನಿತರೆ ನಾಗರೀಕ ಪ್ರದೇಶಗಳಲ್ಲಿ ಎಂದಿನಂತೆ ವ್ಯಾಪಾರ ವ್ಯವಹಾರ ಚಟುವಟಿಕೆಗಳು ನಡೆಯುತ್ತಿದೆ. ಖಾಸಗಿ ವಾಹನಗಳು ಹಾಗೂ ಆಟೋ ಈಗಷ್ಟೇ ರಸ್ತೆಗಳಿಗೆ ಇಳಿಯಲು ಆರಂಭಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


