'ಥಮ್ಸ್ ಅಪ್' ರಾಯಭಾರಿ ಸ್ಥಾನದಿಂದ ಸಲ್ಮಾನ್ ಕೈಬಿಟ್ಟ ಕೋಕಾಕೋಲಾ
ತಂಪು ಪಾನೀಯ ಥಮ್ಸ್ ಅಪ್ ನ ಮುಖ್ಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೋಕಾಕೋಲಾ ಕಂಪನಿ ಕೈಬಿಟ್ಟಿದೆ...

ನವದೆಹಲಿ: ತಂಪು ಪಾನೀಯ ಥಮ್ಸ್ ಅಪ್ ನ ಮುಖ್ಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೋಕಾಕೋಲಾ ಕಂಪನಿ ಕೈಬಿಟ್ಟಿದೆ.
ಕೋಕಾಕೋಲಾ ಮತ್ತು ಸಲ್ಮಾನ್ ನಡುವೆ ಇದ್ದ 4 ವರ್ಷಗಳ ಒಪ್ಪದ ಕಳೆದ ತಿಂಗಳಷ್ಟೇ ಕೊನೆಗೊಂಡಿತ್ತು. ಇದಲ್ಲದೆ ಸಲ್ಮಾನ್ ಕೂಡ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋವೊಂದನ್ನು ಕಾರ್ಯನಿರತರಾಗಿದ್ದು, ಈ ಹಿನ್ನೆಲೆಯಲ್ಲಿ ಸಲ್ಮಾನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರೆಸದಿರಲು ಕಂಪನಿ ತೀರ್ಮಾನಿಸಿದೆ. ಅಲ್ಲದೆ, ರಾಯಭಾರಿ ಸ್ಥಾನಕ್ಕೆ ನಟ ರಣವೀರ್ ಸಿಂಗ್ ಅವರನ್ನು ಕರೆತರಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
2012ರಲ್ಲಿ ನಟ ಅಕ್ಷಯ್ ಕುಮಾರ್ ಜೊತೆಗಿನ ಒಪ್ಪಂದ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಥಮ್ಸ್ ಅಪ್ ಜಾಹೀರಾತಿನಲ್ಲಿ ಭಾಗವಹಿಸಲು ನಟ ಸಲ್ಮಾನ್ ಖಾನ್ ಅವರು ರು.5 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರು. ಇದೀಗ ಸಲ್ಮಾನ್ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಪೂರ್ಣಗೊಂಡ ಬಳಿಕ ರಣವೀರ್ ಸಿಂಗ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಂಪನಿ ಕಾರ್ಯನಿರತವಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


