ಇತನಿಗೆ 350ಕ್ಕೂ ಹೆಚ್ಚು ಗೆಳತಿಯರು, ಲೇಡಿಸ್ ವರ್ಸೆಸ್ ರಿಕಿ ಬಾಹ್ಲ್ ಮೀರಿಸಿದ ಭೂಪ
ಜೀವದಲ್ಲಿ ಒಂದೆರೆಡು ಮದುವೆಯಾಗಿ ನಿಭಾಯಿಸುವುದೇ ಕಷ್ಟದ ಕೆಲಸ ಅಂತಹದರಲ್ಲಿ ಇತ ಬರೋಬ್ಬರಿ 350ಕ್ಕೂ ಹೆಚ್ಚು ಮಹಿಳೆಯನ್ನು ವಿವಾಹವಾಗಿ ವಂಚಿಸಿ...

Published On :
ಹೈದರಾಬಾದ್: ಜೀವದಲ್ಲಿ ಒಂದೆರೆಡು ಮದುವೆಯಾಗಿ ನಿಭಾಯಿಸುವುದೇ ಕಷ್ಟದ ಕೆಲಸ ಅಂತಹದರಲ್ಲಿ ಇತ ಬರೋಬ್ಬರಿ 350ಕ್ಕೂ ಹೆಚ್ಚು ಮಹಿಳೆಯನ್ನು ವಿವಾಹವಾಗಿ ವಂಚಿಸಿದ್ದಾನೆ.
ಕೆ. ವೆಂಕಟ್ ರತ್ನ ರೆಡ್ಡಿ ನೂರಾರು ಯುವತಿಯರೊಂದಿಗೆ ವಿವಾಹವಾಗಿ ವಂಚಿಸಿದ ಖ್ಯಾತಿಯನ್ನು ಹೊಂದಿದ್ದು, ಬಾಲಿವುಡ್ ಲೇಡಿಸ್ ವರ್ಸೆಸ್ ರಿಕಿ ಬಾಹ್ಲ್ ಚಿತ್ರದಲ್ಲಿ ರಣವೀರ್ ಸಿಂಗ್ ಪಾತ್ರವನ್ನು ರೆಡ್ಡಿ ಮೀರಿಸಿದ್ದಾರೆ.
ಮ್ಯಾಟ್ರಿಮೋನಿಯಲ್ ಸೈಟ್(ವೈವಾಹಿಕ ತಾಣಗಳು) ಮೂಲಕ ದೊಡ್ಡ ಕುಳಗಳನ್ನು ತನ್ನ ಬಲೆಗೆ ರೆಡ್ಡಿ ಕೆಡುವುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಕುಟುಂಬದ ದೂರನ್ನು ಆಧರಿಸಿ ಪೊಲೀಸರು ರೆಡ್ಡಿಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ರೆಡ್ಡಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹಲವು ಪ್ರಕರಣಗಳಲ್ಲಿ ಬೇಗಾಗಿದ್ದ ಆರೋಪಿಯಾಗಿದ್ದ.
ಅನಿವಾಸಿ ಭಾರತೀಯ ಕುಟುಂಬದ ಯುವತಿಯೊಬ್ಬಳು ರೆಡ್ಡಿಯೊಂದಿಗೆ ವಿವಾಹಕ್ಕೆ ಮುಂದಾಗಿದ್ದಳು. ಆಕೆಯೊಂದಿಗೆ ವಿವಾಹವಾಗಿ ಕೇವಲ 20 ದಿನಗಳಲ್ಲಿ ಪತ್ನಿಯ ಕುಟುಂಬಕ್ಕೆ 20 ಲಕ್ಷ ರುಪಾಯಿ ವಂಚಿಸಿ ಪರಾರಿಯಾಗಿದ್ದ ರೆಡ್ಡಿ ಇದೇ ರೀತಿ ಸುಮಾರು 350ಕ್ಕೂ ಹೆಚ್ಚು ಮಹಿಳೆಯರಿಗೆ ವಿವಾಹವಾಗಿ ವಂಚಿಸಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hyderabadಹೈದರಾಬಾದ್ವಿವಾಹಿತ ಮಹಿಳೆmarried womenGirlfriendsRicky BahlVenkatratna Reddyಗೆಳತಿಯರುರಿಕಿ ಬಾಹ್ಲ್ವೆಂಕಟ್ ರತ್ನರೆಡ್ಡಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


