ದೇಶ

ಫೇಸ್ ಬುಕ್ ನಲ್ಲಿ ಮಮತಾ ಟೀಕಿಸಿದ ಕೋಲ್ಕತಾ ಯುವತಿಗೆ ಸಾರ್ವಜನಿಕವಾಗಿ ಅವಮಾನ

ಫೇಸ್ ಬುಕ್ ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಕೋಲ್ಕತಾದ ಯುವತಿಯೊಬ್ಬರಿಗೆ...

ಫೇಸ್ ಬುಕ್ ನಲ್ಲಿ ಮಮತಾ ಟೀಕಿಸಿದ ಕೋಲ್ಕತಾ ಯುವತಿಗೆ ಸಾರ್ವಜನಿಕವಾಗಿ ಅವಮಾನ
ರಾಜಶ್ರೀ ಚಟ್ಟೋಪಧ್ಯಾಯ - ಹೋರ್ಡಿಂಗ್
Published On :
ಕೋಲ್ಕತ: ಫೇಸ್ ಬುಕ್ ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಕೋಲ್ಕತಾದ ಯುವತಿಯೊಬ್ಬರಿಗೆ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ.
ರಾಜಶ್ರೀ ಚಟ್ಟೋಪಧ್ಯಾಯ ಎಂಬ ಯುತಿ ದುರ್ಗಾ ಪೂಜೆ ಸಂಬಂಧ ಹಾಕಿದ ಸ್ಟೇಟಸ್​ನಿಂದಾಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುರ್ಗಾ ಪೂಜೆಗಾಗಿ ರಾಜ್ಯ ಸರ್ಕಾರ ಹಲವು ಸಂಘ ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತದೆ. ಇದನ್ನು ಪ್ರಶ್ನಿಸಿ ರಾಜಶ್ರೀ ಫೇಸ್​ಬುಕ್​ನಲ್ಲಿ ಸ್ಟೇಟಸ್ ಹಾಕಿದ್ದರು.
ಇದರಿಂದ ಸಿಟ್ಟಾಗಿರುವ ಕೆಲವರು ಇಂತಹ ಸ್ಟೇಟಸ್ ಹಾಕಿದ ನಿನಗೆ ನಾಚಿಕೆಯಾಬೇಕು ಎಂಬ ಸಂದೇಶವಿರುವ ಹೋರ್ಡಿಂಗ್ ಅನ್ನು ಆಕೆಯ ಮನೆ ಮುಂದೆ ಹಾಕಿದ್ದಾರೆ. ಜತೆಗೆ ಆ ಹೋರ್ಡಿಂಗ್​ನಲ್ಲಿ ಆಕೆಯ ಫೇಸ್​ಬುಕ್ ಸ್ಟೇಟಸ್​ನ ಫೋಟೋ ಸಹ ಹಾಕಿದ ಘಟನೆ ಭಾನುವಾರ ನೆಡೆದಿದೆ, ಅಂದೇ ತೃಣಮೂಲ ಕಾಂಗ್ರೆಸ್​ನ ಕೆಲವು ಮಹಿಳಾ ಸದಸ್ಯರು ಆಕೆಯ ಮನೆಗೆ ಬಂದು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ದುರ್ಗಾ ಪೂಜೆಗಾಗಿ ಸರ್ಕಾರ ಸಚಿವರುಗಳ ಮಾಲೀಕತ್ವದ ಕೆಲವು ಸಂಘಗಳಿಗೆ ಕೋಟ್ಯಾಂತರ ರೂ. ಧನ ಸಹಾಯ ಮಾಡುತ್ತದೆ. ಆದರೆ ಕಾರ್ಮಿಕರಿಗೆ ಭತ್ಯೆ ನೀಡಲು ಸರ್ಕಾರದ ಬಳಿ ಹಣವಿರುವುದಿಲ್ಲ. ಇದನ್ನು ಪ್ರಶ್ನಿಸಿ ನಾನು ಸ್ಟೇಟಸ್ ಹಾಕಿದ್ದೆ. ನಾನು ಏನೂ ತಪ್ಪು ಮಾಡಿಲ್ಲ ಎಂದು ಯುವತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.