ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ ದೊಡ್ಡ ಸವಾಲು: ಸುಷ್ಮಾ ಸ್ವರಾಜ್
ಪಾಕಿಸ್ತಾನವನ್ನು ಉಗ್ರರ ಕಾರ್ಖಾನೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಕರೆದ ಬಳಿಕ ಮತ್ತೊಬ್ಬ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್...

Published On :
ನವದೆಹಲಿ: ಪಾಕಿಸ್ತಾನವನ್ನು ಉಗ್ರರ ಕಾರ್ಖಾನೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಕರೆದ ಬಳಿಕ ಮತ್ತೊಬ್ಬ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಉಗ್ರಗಾಮಿಗಳಿಗೆ ಬೆಂಬಲ ನೀಡುವವರು, ಉಗ್ರಗಾಮಿಗಳಲ್ಲಿ ಒಳ್ಳೆಯವರು, ಕೆಟ್ಟವರು ಎಂದು ವಿಂಗಡಿಸುವವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಒಂದು ದೇಶವೇ ಅಲ್ಲಿನ ಭಯೋತ್ಪಾದಕರಿಗೆ ಬೆಂಬಲ ಸೂಚಿಸುವ ಭಯೋತ್ಪಾದನೆಗಿಂತ ದೊಡ್ಡ ಸವಾಲು ಬೇರೊಂದಿಲ್ಲ.ಭಯೋತ್ಪಾದಕರಿಗೆ ಬೆಂಬಲ ನೀಡುವವರಿಗೆ, ಒಳ್ಳೆಯ ಉಗ್ರರು, ಕೆಟ್ಟ ಉಗ್ರರು ಎಂದು ವಿಂಗಡಿಸುವವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಇಂದು ಬ್ರಿಕ್ಸ್ ಮಾಧ್ಯಮ ವೇದಿಕೆಯಾದ ಬದಲಾವಣೆಯ ಜಗತ್ತಿನಲ್ಲಿ ಬ್ರಿಕ್ಸ್ ನ್ನು ಉದ್ಘಾಟಿಸಿ ಹೇಳಿದರು.
ಸುಷ್ಮಾ ಸ್ವರಾಜ್ ಅವರು ಹೇಳಿದ ಮಾತಿನಲ್ಲಿ ಗೂಡಾರ್ಥವೇನು ಇರಲಿಲ್ಲ. ಅವರು ಪಾಕಿಸ್ತಾನವನ್ನು ಉದ್ದೇಶಿಸಿ ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತಿತ್ತು. ಉತ್ತಮ ಭಯೋತ್ಪಾದಕರೆಂದು ಹೇಳಿಕೊಂಡು ಹಲವು ಉಗ್ರಗಾಮಿ ಗುಂಪುಗಳಿಗೆ ಪಾಕ್ ಬೆಂಬಲ ನೀಡುತ್ತಿದ್ದು ಆ ಉಗ್ರಗಾಮಿಗಳು ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ದಾಳಿ ನಡೆಸುತ್ತಾ ಬಂದಿವೆ.
ಕಳೆದ ವಾರ ಗೋವಾದಲ್ಲಿ ಕೊನೆಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲಿ, ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಮತ್ತು ಲಷ್ಕರ್ ಎ ತೊಯ್ಬಾ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳು ಎಂದು ಘೋಷಿಸಲು ನಡೆಸಿದ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿತ್ತು.
''ಬ್ರಿಕ್ಸ್ ಶೃಂಗಸಭೆಯಲ್ಲಿ ಭಯೋತ್ಪಾದನೆ ಒಂದು ಜಾಗತಿಕ ಸವಾಲು ಎಂಬುದನ್ನು ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಭಯೋತ್ಪಾದನೆಯನ್ನು ನಿಗ್ರಹಿಸದಿದ್ದರೆ ರಾಷ್ಟ್ರಗಳಿಗೆ ಪ್ರಗತಿಯಿಲ್ಲ ಎಂಬುದನ್ನು ವಿಶ್ವ ಸಮುದಾಯಗಳು ಮನಗಂಡಿವೆ ಎಂದು ಅವರು ಪ್ರಧಾನಿ ಮೋದಿಯವರ ಮಾತುಗಳನ್ನು ಉಲ್ಲೇಖಿಸಿದರು.
ಮೊನ್ನೆ ಬ್ರಿಕ್ಸ್ ಶೃಂಗಸಭೆಗೆ ಭಾರತ ಭೂತಾನ್, ಬಾಂಗ್ಲಾದೇಶ, ನೇಪಾಳ್, ಶ್ರೀಲಂಕಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳನ್ನು ಕೂಡ ಆಹ್ವಾನಿಸಿತ್ತು. ಈ ಎಲ್ಲಾ ದೇಶಗಳನ್ನು ಒಟ್ಟಾಗಿ ಬಿಮ್ ಸ್ಟೆಕ್ ಎಂದು ಕರೆಯಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


