ಪುಣೆ: ಹಾಡಹಗಲೇ ಬಿಜೆಪಿ ಮುಖಂಡ ಸಚಿನ್ ಶೆಲ್ಕೆ ಹತ್ಯೆ
ಬಿಜೆಪಿ ನಾಯಕ ಹಾಗೂ ಮಾಜಿ ಮೇಯರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಪುಣೆಯಿಂದ 35 ಕಿ.ಮೀ. ದೂರದ ತಾಲೇಗಾಂವ್ ಧಬಾಡೆ..

ಪುಣೆ :ಬಿಜೆಪಿ ನಾಯಕ ಹಾಗೂ ಮಾಜಿ ಮೇಯರ್ ಒಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ಪುಣೆಯಿಂದ 35 ಕಿ.ಮೀ. ದೂರದ ತಾಲೇಗಾಂವ್ ಧಬಾಡೆ ಎಂಬಲ್ಲಿ ನಡೆದಿದೆ.
38ರ ವರ್ಷದ ತಾಲೇಗಾಂವ್ ಮುನಿಸಿಪಲ್ ಕೌನ್ಸಿಲ್‌ನ ಮಾಜಿ ಮೇಯರ್ ಸಚಿನ್ ಶೆಲ್ಕೆ. ಮೃತ ದುರ್ದೈವಿ. ಶೆಲ್ಕೆ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಹಂತಕರು ಅವರನ್ನು ಭಾನುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೆಟ್ರೋಲ್ ಪಂಪ್ ಸಮೀಪ ಅಡ್ಡಗಟ್ಟಿದರು. ಶೇಳ್ಕೆ ಅವರನ್ನು ಹಂತಕರು ಮೊದಲು ಕಾರಿನಿಂದ ಕೆಳಗಿಳಿಯುವಂತೆ ಹೇಳಿದರು.
ಕಾರಿನಿಂದ ಹೊರ ಬರುತ್ತಿದ್ದಂತೆಯೇ ಹಂತಕರು ಶೆಲ್ಕೆ ಮೇಲೆ ಗುಂಡು ಹಾರಿಸಿದರು. ಬಳಿಕ ಹರಿತವಾದ ಆಯುಧದಿಂದ ಅವರನ್ನು ಕೊಚ್ಚಿ ಕೊಂದು ಪರಾರಿಯಾದರು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಜೈ ಜಾಧವ್ ಹೇಳಿದ್ದಾರೆ. ಶೆಲ್ಕೆ ಅವರ ಹತ್ಯೆಗೆ ಹಳೇ ವೈಷಮ್ಯ ಕಾರಣವಿರಬಹುದೆಂದು ಅವರು ಹೇಳಿದರು.
ಗುಂಡೇಟು ಹಾಗೂ ಮಾರಕಾಸ್ತ್ರಗಳ ದಾಳಿಗೆ ಗುರಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಶೇಳ್ಕೆ ಅವರನ್ನು ಸ್ಥಳದಲ್ಲಿದ್ದವರು ತತ್‌ಕ್ಷಣವೇ ಖಾಸಗಿ ಆಸ್ಪತ್ರೆಗೆ ಒಯ್ದರಾದರೂ ಅಲ್ಲಿನ ವೈದ್ಯರು ಶೆಲ್ಕೆ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಶ್ಯಾಮ್ ದಾಭಡೆಯ ಸಹವರ್ತಿಗಳೆಂದು ಶಂಕಿಸಲಾಗಿರುವ ಹತ್ತು ಮಂದಿಯ ವಿರುದ್ಧ ಶೆಲ್ಕೆ ಹತ್ಯೆಗೆ ಸಂಬಂಧಿಸಿ ಕೇಸು ದಾಖಲಿಸಲಾಗಿದೆ. ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


