ದೇಶ

ಪರ ಪುರುಷರೊಂದಿಗೆ ಪತ್ನಿ ರಾಸಲೀಲೆ: ಪ್ರಶ್ನಿಸಿದ ಪತಿಯ ನಾಲಿಗೆ ಕತ್ತರಿಸಿದ ಪತ್ನಿ

ಪರ ಪುರುಷರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಪತ್ನಿಯನ್ನು ಪ್ರಶ್ನಿಸಿದ ಗಂಡನ ನಾಲಿಗೆಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ, ಆತನ ಸ್ನೇಹಿತ ಮೂವರು ಸೇರಿ...

ಪರ ಪುರುಷರೊಂದಿಗೆ ಪತ್ನಿ ರಾಸಲೀಲೆ: ಪ್ರಶ್ನಿಸಿದ ಪತಿಯ ನಾಲಿಗೆ ಕತ್ತರಿಸಿದ ಪತ್ನಿ
ಅಪರಾಧ
Published On :

ಮುರಾದಾಬಾದ್: ಪರ ಪುರುಷರೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದ ಪತ್ನಿಯನ್ನು ಪ್ರಶ್ನಿಸಿದ ಗಂಡನ ನಾಲಿಗೆಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ, ಆತನ ಸ್ನೇಹಿತ ಮೂವರು ಸೇರಿ ಕತ್ತರಿಸಿ ಹಾಕಿದ್ದಾರೆ.

ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜೀತೇಂದ್ರ ಕಳೆದ 9 ತಿಂಗಳಿನಿಂದ ಪತ್ನಿ ಜತೆ ಧರ್ಮಪುರಿ ಗ್ರಾಮದಲ್ಲಿ ವಾಸವಾಗಿದ್ದ, ಕಳೆದ ಭಾನುವಾರ ಕೆಲಸಕ್ಕೆ ಹೋಗಿದ್ದ ಜೀತೇಂದ್ರ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ಪರ ಪುರುಷರ ಜತೆ ರಾಸಲೀಲೆಯಲ್ಲಿ ತೊಡಗಿದ್ದಾಳೆ ಇದರಿಂದ ಕೋಪಗೊಂಡ ಜೀತೇಂದ್ರ ಆಕೆಯನ್ನು ಥಳಿಸಲು ಮುಂದಾಗಿದ್ದಾನೆ ಇದರಿಂದ ಪತ್ನಿ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನ ಜತೆ ಸೇರಿ ಗಂಡನ ನಾಲಿಗೆಯನ್ನು ಕತ್ತರಿಸಿ ಪರಾರಿಯಾಗಿದ್ದಾರೆ.

ಗಾಯಗೊಂಡ ಜೀತೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಪೊಲೀಸರಿಗೆ ದೂರು ನೀಡಿದ್ದು, ಪರಾರಿಯಾಗಿರುವ ಪತ್ನಿ ಹಾಗೂ ಪ್ರಿಯಕರನ ಬಂಧನಕ್ಕೆ ಜಾಲ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.