ಈ ಹಿಂದೆ ಸೀಮಿತ ದಾಳಿ ನಡೆದಿಲ್ಲ ಎಂಬ ಪರಿಕ್ಕರ್ ಹೇಳಿಕೆಗೆ 'ಕೈ' ಆಕ್ರೋಶ, ಕ್ಷಮೆಗೆ ಆಗ್ರಹ
ಈ ಹಿಂದೆ ಯಾವತ್ತೂ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ಹೋಗಿ ಸೀಮಿತ ದಾಳಿ ನಡೆಸಿಲ್ಲ....

Published On :
ನವದೆಹಲಿ: ಈ ಹಿಂದೆ ಯಾವತ್ತೂ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ಹೋಗಿ ಸೀಮಿತ ದಾಳಿ ನಡೆಸಿಲ್ಲ. ಭಾರತೀಯ ಸೇನೆ ಇದೆ ಮೊದಲ ಬಾರಿ ಅಂತಹ ದಾಳಿ ನಡೆಸಿದೆ ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಸಂಬಂಧ ರಕ್ಷಣಾ ಸಚಿವರು ಕ್ಷಮೆ ಕೇಳಬೇಕು ಎಂದು ಬುಧವಾರ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, ರಕ್ಷಣಾ ಸಚಿವರು ಈ ಹಿಂದೆ ಸೀಮಿತ ದಾಳಿ ನಡೆದಿಲ್ಲ ಎಂದು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಸೇನೆಯ ಬಲಿದಾನವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಈ ಅಸಹ್ಯಕರ ಹೇಳಿಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಗೌರವ ಹೆಚ್ಚಿಸಲು ಮನೋಹರ್ ಪರಿಕ್ಕರ್ ಅವರು ಗೋವಾ, ಲಖನೌ ಹಾಗೂ ಆಗ್ರದಲ್ಲಿ ರಾಷ್ಟ್ರೀಯ ಭದ್ರತೆಯನ್ನು ಒಂದು ಕಾರ್ಯಕ್ರಮವಾಗಿ ಪರಿವರ್ತಿಸುತ್ತಿರುವುದು ದುರದೃಷ್ಟಕರ ಎಂದು ಸುರ್ಜೆವಾಲಾ ಹೇಳಿದ್ದಾರೆ.
ಪರಿಕ್ಕರ್ ಅವರೇ ಸೀಮಿತ ದಾಳಿಯ ಎಲ್ಲಾ ರೀತಿಯ ಗೌರವ ಭಾರತೀಯ ಸೇನೆ ಸಲ್ಲಬೇಕು. ಆದರೆ ನೀವು ಏಕೆ ಜನರ ದಾರಿ ತಪ್ಪಿಸುತ್ತಿದ್ದೀರಿ? ಮತ್ತು ಈ ಹಿಂದಿನ ಸೀಮಿತ ದಾಳಿಯನ್ನು ಕಡೆಗಣಿಸುವ ಮೂಲಕ ಸೇನೆಯನ್ನು ಏಕೆ ದುರ್ಬಲಗೊಳಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


