ದೇಶ

ಸೀಮಿತ ದಾಳಿಯ ಸಮಯ ಪ್ರಶ್ನಿಸಿದ ಉತ್ತರಾಖಂಡ್ ಕಾಂಗ್ರೆಸ್

ಭಾರತೀಯ ಸೇನೆ ಇತ್ತೀಚಿಗೆ ಉಗ್ರರ ವಿರುದ್ಧ ನಡೆಸಿದ ಸೀಮಿತ ದಾಳಿಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ...

ಸೀಮಿತ ದಾಳಿಯ ಸಮಯ ಪ್ರಶ್ನಿಸಿದ ಉತ್ತರಾಖಂಡ್ ಕಾಂಗ್ರೆಸ್
ಸಾಂದರ್ಭಿಕ ಚಿತ್ರ
Published On :
ಡೆಹ್ರಾಡೂನ್: ಭಾರತೀಯ ಸೇನೆ ಇತ್ತೀಚಿಗೆ ಉಗ್ರರ ವಿರುದ್ಧ ನಡೆಸಿದ ಸೀಮಿತ ದಾಳಿಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಉತ್ತರಾಖಂಡ್ ಕಾಂಗ್ರೆಸ್, ದಾಳಿ ನಡೆಸಿದ ಸಮಯನ್ನು ಪ್ರಶ್ಮಿಸಿದೆ.
ಸ್ವಲ್ಪ ಮುಂಚಿತವಾಗಿಯೇ ಸೀಮಿತ ದಾಳಿ ನಡೆಸಿದ್ದರೆ ಭಾರತ 19 ಯೋಧರನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದಿರುವ ಉತ್ತರಾಖಂಡ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಅವರು, ದಾಳಿಗೆ ಸಂಬಂಧಿಸಿದಂತೆ ಪೋಸ್ಟರ್ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿರುವ ಬಿಜೆಪಿ ಈ ದಾಳಿ ನಡೆಸಿದ್ದೋ ಅಥವಾ ಅದರ ಅಂಗ ಸಂಸ್ಥೆಗಳು ದಾಳಿ ನಡೆಸಿವೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಸೀಮಿತ ದಾಳಿ ನಡೆದಿದೆ. ಆದರೆ ಈ ರೀತಿ ರಾಜಕೀಯ ಲಾಭ ಪಡೆಯಲು ಯತ್ನಿಸಿಲ್ಲ ಎಂದು ಕಿಶೋರ್ ಉಪಾಧ್ಯಾಯ ಅವರು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸೀಮಿತ ದಾಳಿಯ ನಂತರ ದೇಶದಲ್ಲಿ ಸೃಷ್ಟಿಯಾದ ವಾತಾವರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಉಪಾಧ್ಯಾಯ ಅವರು, 19 ಯೋಧರ ಬಲಿದಾನವನ್ನು ಮರೆತು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.