ದೇಶ

ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು...

ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ
ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಇದ್ದರು.
Published On :
ನವದೆಹಲಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು.
15 ಸಂಪುಟಗಳ ಈ ಹೊತ್ತಿಗೆಯು ಉಪಾಧ್ಯಾಯ ಅವರ ಜೀವನದ ಪ್ರಮುಖ ಘಟನೆಗಳು, ಜನಸಂಘದ ಪ್ರಯಾಣ,1965ರ ಭಾರತ-ಪಾಕಿಸ್ತಾನ ಯುದ್ಧ, ತಾಷ್ಕೆಂಟ್ ಒಪ್ಪಂದ ಮತ್ತು ಗೋವಾದ ವಿಮೋಚನೆ ಮೊದಲಾದ ವಿಷಯಗಳನ್ನು ಒಳಗೊಂಡಿದೆ.
1967ರಲ್ಲಿ ಉಪಾಧ್ಯಾಯ ಅವರು ಜನಸಂಘದ ಮುಖ್ಯಸ್ಥರಾದ ನಂತರ ಅವರನ್ನು ಹತ್ಯೆಗೈದವರೆಗಿನ ಸಂಗತಿಗಳನ್ನು ಸಂಪುಟ ಒಳಗೊಂಡಿದೆ.
ಅವಿಭಾಜ್ಯ ಮಾನವತಾವಾದದ ಸಂಶೋಧನೆ ಮತ್ತು ಅಭಿವೃದ್ಧಿ ಫೌಂಡೇಶನ್ ಮತ್ತು ಪ್ರಭಾತ್ ಪಬ್ಲಿಕೇಶನ್ ಪುಸ್ತಕವನ್ನು ಹೊರತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.