ಸೀಮಿತ ದಾಳಿ ಸಾಕ್ಷ್ಯ ಕೇಳುತ್ತಿರುವವರಿಗೆ ಮರ್ಯಾದೆ ಇಲ್ಲ: ಪರಿಕ್ಕರ್
ಪಿಒಕೆ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದೇ ಇಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ನವದೆಹಲಿ: ಪಿಒಕೆ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದೇ ಇಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮ ಕುರಿತಂತೆ ರಾಮ್'ಲೀಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಕೆಲ ರಾಜಕೀಯ ನಾಯಕರು ಸಾಕ್ಷ್ಯಾಧಾರಗಳನ್ನು ಕೇಳುತ್ತಿದ್ದಾರೆ. ನಾಯಕರು ಸಾಕ್ಷ್ಯಾಧಾರಗಳಿಗೆ ಒತ್ತಾಯಿಸುತ್ತಿರುವುದು ದೇಶದ ಕೆಚ್ಚೆದೆಯ ವೀರ ಯೋಧರನ್ನು ಕುಗ್ಗಿಸಿದಂತಾಗುತ್ತದೆ. ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದಿಲ್ಲ ಎಂದು ಹೇಳಿದ್ದಾರೆ.
ಸಾಕ್ಷ್ಯಾಧಾರಕ್ಕಾಗಿ ನಾಯಕರು ಒತ್ತಾಯಿಸುತ್ತಿರುವುದರಿಂದ ನನಗೆ ಬಹಳ ನೋವಾಗಿದೆ. ಅಂತಹವರಿಗೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಬೇಕೆಂದು ಅನಿಸುತ್ತಿದೆ. ಆದರೆ, ಒಬ್ಬ ರಕ್ಷಣಾ ಸಚಿವನಾಗಿ ನಾನು ಕೂಡ ಕೆಲವು ಮರ್ಯಾದೆಯಿಂದ ನಡೆದುಕೊಳ್ಳಬೇಕಿದೆ. ಹೀಗಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಸೀಮಿತ ನಡೆಸಿರುವುದು ಶೇ.100ಕ್ಕೆ 100ರಷ್ಟು ಸತ್ಯ. ದೇಶಕ್ಕಾಗಿರುವ ನಿಷ್ಠಾವಂತರ ಸಂಖ್ಯೆ ಅತೀ ವಿರಳ. ಇಂತಹ ವ್ಯಕ್ತಿಗಳೇ ಇಂದು ಭಾರತೀಯ ಸೇನೆ ಕುರಿತಂತೆ ಟೀಕೆಗಳನ್ನು ಮಾಡುತ್ತಿದ್ದಾರೆ. ಅಂತಹ ಜನರಿಗೆ ಸಾಕ್ಷ್ಯಾಧಾರ ನೀಡುವ ಅಗತ್ಯ ನಮಗಿಲ್ಲ. ಕೆಲಸ ಮಾಜಿ ಯೋಧರು ನನಗೆ ಪತ್ರಗಳನ್ನು ಬರೆದಿದ್ದಾರೆ. ಅಗತ್ಯ ಬಿದ್ದರೆ ಗಡಿಯಲ್ಲಿ ಹೋರಾಡಲು ನಾವು ಸಿದ್ಧರಿದ್ದೇವೆಂದು ಹೇಳಿದ್ದಾರೆ. ಅಂತಹ ಯೋಧರಿಗೆ ನಾನು ಈ ಮೂಲಕ ಸೆಲ್ಯೂಟ್ ಮಾಡಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


