ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸದೇ ಇದ್ದರೆ ಅಪಾಯಕಾರಿ ಸಂದೇಶ ರವಾನೆ: ಭಾರತ
ಮಸೂದ್ ಅಜರ್ ಗೆ ನಿಷೇಧ, ಆರ್ಥಿಕ ದಿಗ್ಬಂಧನ ಪಟ್ಟಿಗೆ ಸೇರಿಸುವ ಭಾರತದ ಮನವಿಗೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವ ಕ್ರಮದ ಬಗ್ಗೆ ಚೀನಾ ಸರ್ಕಾರದೊಂದಿಗೆ ಮಾತುಕತೆ....

ನವದೆಹಲಿ: ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ, ಆರ್ಥಿಕ ದಿಗ್ಬಂಧನ ಪಟ್ಟಿಗೆ ಸೇರಿಸುವ ಭಾರತದ ಮನವಿಗೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವ ಕ್ರಮದ ಬಗ್ಗೆ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ವಿಕಾಸ್ ಸ್ವರೂಪ್, ಒಂದು ವೇಳೆ ಮಸೂದ್ ಅಜರ್ ಗೆ ನಿಷೇಧ ವಿಧಿಸದೇ ಇದ್ದರೆ, ಅದು ಅಪಾಯಕಾರಿ ಸಂದೇಶವನ್ನು ರವಾನೆ ಮಾಡುತ್ತದೆ ಎಂಬುದನ್ನು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.
ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸುವುದರ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 14 ರಾಷ್ಟ್ರಗಳು ಒಂದು ನಿಲುವು ಹೊಂದಿದ್ದರೆ, ಚೀನಾ ಮಾತ್ರ ಭಿನ್ನ ನಿಲುವು ಹೊಂದಿದೆ. ಭಾರತದ ಮನವಿಗೆ ಸ್ಪಂದಿಸಿ ಉಗ್ರ ಮಸೂದ್ ಅಜರ್ ಗೆ ನಿಷೇಧ ವಿಧಿಸಿದರೆ ವಿಶ್ವಸಂಸ್ಥೆ ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ವಿಕಾಸ್ ಸ್ವರೂಪ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಪಾಕಿಸ್ತಾನದ ಸಂಸತ್ ನಲ್ಲಿ ಬುರ್ಹಾನ್ ವಾನಿಯನ್ನು ಹೊಗಳಿರುವುದರ ಬಗ್ಗೆಯೂ ವಿಕಾಸ್ ಸ್ವರೂಪ್ ಪ್ರತಿಕ್ರಿಯೆ ನೀಡಿದ್ದು, ಉಗ್ರ ಬುರ್ಹಾನ್ ವಾನಿಯನ್ನು ಹೊಗಳುವ ಮೂಲಕ ಪಾಕಿಸ್ತಾನ ತನ್ನನ್ನು ತಾನೇ ಬಯಲುಮಾಡಿಕೊಂಡಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


