ದೇಶ

ಕಾಂಗ್ರೆಸ್ ನಾಯಕರು ಎರೆಹುಳುವಿನಂತೆ, ಆದರೂ ಹಾವಿನಂತೆ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ: ಶಿವಸೇನೆ

ಕಾಂಗ್ರೆಸ್ ನಾಯಕರು ಎರೆಹುಳುಗಳಂತೆ ಆದರೂ ನಾಗರ ಹಾವಿನ ರೀತಿಯಲ್ಲಿ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ ಎಂದು ಶಿವಸೇನೆ ಹೇಳಿದೆ.

ಕಾಂಗ್ರೆಸ್ ನಾಯಕರು ಎರೆಹುಳುವಿನಂತೆ, ಆದರೂ ಹಾವಿನಂತೆ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ: ಶಿವಸೇನೆ
ಶಿವಸೇನೆ
Published On :

ಮುಂಬೈ: ಶಿವಸೇನೆಯನ್ನು ನಾಗರ ಹಾವಿಗೆ ಹೋಲಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೇ ಪಾಟೀಲ್ ಗೆ  ಶಿವಸೇನೆ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರು ಎರೆಹುಳುಗಳಂತೆ ಆದರೂ ನಾಗರ ಹಾವಿನ ರೀತಿಯಲ್ಲಿ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ ಎಂದು ಹೇಳಿದೆ.

ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಲೇಖನ ಬರೆದಿರುವ ಶಿವಸೇನೆ, ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೇ ಅವರ ನಾಯಕತ್ವವನ್ನು ಪ್ರಶ್ನಿಸಿರುವ ಶಿವಸೇನೆ, ರಾಧಾಕೃಷ್ಣ ವಿಖೇ ಹಾಗು ಅವರ ತಂದೆ ಬಾಳಾಸಾಹೇಬ್ ವಿಖೇ ಇಬ್ಬರು  ಕಾಂಗ್ರೆಸ್ ನಲ್ಲಿದ್ದಾಗ ನಾಶವಾಗುತ್ತಿದ್ದರು. ಅವಧಿಗೆ ಅಧಿಕಾರದ ಅನುಭವವಾಗಿದ್ದು ಶಿವಸೇನೆಗೆ ಸೇರಿದ ನಂತರವೇ ಎಂದು ಹೇಳಿದೆ. ಶಿವಸೇನೆ ವಿರುದ್ಧ ಇಂದು ಮಾತನಾಡುತ್ತಿರುವವರು ಒಂದು ವೇಳೆ ಶಿವಸೇನೆಗೆ ಸೇರದೆ ಇರುತ್ತಿದ್ದಿದ್ದರೆ ಜನರಿಗೆ ರಾಧಾಕೃಷ್ಣ ವಿಖೇ ಅವರ ಗ್ರಾಮವು ಪರಿಚಯವಿರುತ್ತಿರಲಿಲ್ಲ ಎಂದು ಹೇಳಿದೆ.

ರಾಧಾಕೃಷ್ಣ ವಿಖೇ ಹಾಗೂ ಅವರ ತಂದೆ ನಿರ್ದಿಷ್ಟ ಋತುಗಳಲ್ಲಿ ಹೊರಬರುವ ಎರೆಹುಳುಗಳಿದ್ದಂತೆ, ಅವರೆಂದಿಗೂ ನಾಗರಹಾವಂತೆ ಆಗಲು ಸಾಧ್ಯವಿಲ್ಲ ಎಂದು ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಬರೆದಿದೆ. ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಾದ ರಾಧಾಕೃಷ್ಣ ವಿಖೇ, ಶಿವಸೇನೆ ನಾಗರಹಾವಿನಂತೆ ವಿಷವನ್ನು ಕಕ್ಕುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.