ದೇಶ

ಪ್ರಧಾನಿ ಮೋದಿ ಭೇಟಿ ಮಾಡಲು "ಮಣಿಪುರದ ಐರನ್ ಲೇಡಿ" ಉತ್ಸುಕ!

ಸತತ 16 ವರ್ಷಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ರಾಜಕೀಯದತ್ತ ಮುಖಮಾಡಿರುವ ಮಣಿಪುರದ ಐರನ್ ಲೇಡಿ ಎಂದೇ ಖ್ಯಾತಿಗಳಿಸಿರುವ ಐರೋಮ್ ಶರ್ಮಿಳಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಭೇಟಿ ಮಾಡಲು "ಮಣಿಪುರದ ಐರನ್ ಲೇಡಿ" ಉತ್ಸುಕ!
ಐರೋಮ್ ಶರ್ಮಿಳಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಸತತ 16 ವರ್ಷಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ರಾಜಕೀಯದತ್ತ ಮುಖಮಾಡಿರುವ ಮಣಿಪುರದ ಐರನ್ ಲೇಡಿ ಎಂದೇ ಖ್ಯಾತಿಗಳಿಸಿರುವ ಐರೋಮ್ ಶರ್ಮಿಳಾ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.

ಮಣಿಪುರದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ನಿರಂತರ 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಐರೋಮ್ ಶರ್ಮಿಳಾ, ಕಳೆದ ಆಗಸ್ಟ್ 9 ರಂದು ಸತ್ಯಾಗ್ರಹವನ್ನು  ಅಂತ್ಯಗೊಳಿಸಿದ್ದರು. ನಂತರ ರಾಜಕೀಯದತ್ತ ಮುಖಮಾಡಿರುವ ಶರ್ಮಿಳಾ, ರಾಜಕೀಯಕ್ಕೆ ಬಂದು ಮಣಿಪುರದ ಜನರ ಸೇವೆ ಮಾಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಮುಂದಿನ  ಚುನಾವಣೆ ಸ್ಪರ್ಧಿಸುವುದಾಗಿ ತಿಳಿಸಿದ್ದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಸಂದರ್ಭದಲ್ಲಿ ಅವರಿಂದ ಸಲಹೆ ಪಡೆದಿದ್ದರು.

ಕಳೆದ ಸೆಪ್ಟೆಂಬರ್ 26ರಂದು ಕೇಜ್ರಿವಾಲ್ ರನ್ನು ಭೇಟಿ ಮಾಡಿದ್ದ ಐರೋಮ್ ಶರ್ಮಿಳಾ ಮಣಿಪುರ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳನ್ನು ಹೇಗೆ ಎದುರಿಸಬೇಕು ಮತ್ತು ಗೆಲುವು  ಸಾಧಿಸಲು ಏನು ಮಾಡಬೇಕು ಎಂದು ಸಲಹೆ ಪಡೆದಿದ್ದರು. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿರುವುದಾಗಿ ಹೇಳಿರುವ ಶರ್ಮಿಳಾ ಅವರಿಂದಲೂ  ಸಲಹೆ ಪಡೆಯುವುದಾಗಿ ತಿಳಿಸಿದ್ದಾರೆ.

ಸೇನಾ ಪಡೆಗಳ ವಿಶೇಷಾಧಿಕಾರ ಕಾಯ್ದೆಯಲ್ಲಿ ಬದಲಾವಣೆ ತರುವ ಸಂಬಂಧ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕು ಎಂದು ಶರ್ಮಿಳಾ ಮುನ್ನ ತಮ್ಮ ಅಪೇಕ್ಷೆ  ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.