ದೇಶ

ಪೊಲೀಸರ ಸಮವಸ್ತ್ರವಿರುವ ಬ್ಯಾಗ್ ಪತ್ತೆ: ಹರಿದ್ವಾರ, ಡೆಹ್ರಾಡೂನ್'ನಲ್ಲಿ ಹೈ ಅಲರ್ಟ್ ಘೋಷಣೆ

ಪೊಲೀಸರ ಸಮವಸ್ತ್ರವಿರಿಸಿರುವ ಬ್ಯಾಗ್ ವೊಂದು ಹರಿದ್ವಾರದಲ್ಲಿ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಹರಿದ್ವಾರ ಹಾಗೂ ಡೆಹ್ರಾಡೂನ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ...

ಪೊಲೀಸರ ಸಮವಸ್ತ್ರವಿರುವ ಬ್ಯಾಗ್ ಪತ್ತೆ: ಹರಿದ್ವಾರ, ಡೆಹ್ರಾಡೂನ್'ನಲ್ಲಿ ಹೈ ಅಲರ್ಟ್ ಘೋಷಣೆ
Published On :

ಹರಿದ್ವಾರ: ಪೊಲೀಸರ ಸಮವಸ್ತ್ರವಿರಿಸಿರುವ ಬ್ಯಾಗ್ ವೊಂದು ಹರಿದ್ವಾರದಲ್ಲಿ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಹರಿದ್ವಾರ ಹಾಗೂ ಡೆಹ್ರಾಡೂನ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಪಂಜಾಬ್ ಪೊಲೀಸ್ 3 ಸಮವಸ್ತ್ರಗಳನ್ನು ಬ್ಯಾಗ್ ನಲ್ಲಿರಿಸಲಾಗಿದ್ದು, ಸುಟ್ಟು ಹಾಕಿರುವ ರೀತಿಯಲ್ಲಿ ಬ್ಯಾಗ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರ, ಡೆಹ್ರಾಡೂನ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್ ಪತ್ತೆ ಹಿನ್ನಲೆಯಲ್ಲಿ ಹರಿದ್ವಾರದ ಮಂಗ್ಲೌರ್ ನಲ್ಲಿಯೂ ತಪಾಸಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್ ನಬಾ ಜೈಲಿನಲ್ಲಿ ಉಗ್ರರು ತಪ್ಪಿಸಿಕೊಂಡಿದ್ದರು. ಉಗ್ರರಿಗೆ ಸಹಾಯ ಮಾಡಿದ ವ್ಯಕ್ತಿಯೇ ಈ ಸಮವಸ್ತ್ರಗಳನ್ನು ಇರಿಸಿಕೊಂಡಿದ್ದ ಎಂಬ ಶಂಕೆಗಳು ವ್ಯಕ್ತವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಣಿಕಾಂತ್ ಮಿಶ್ರಾ ಅವರು ಹೇಳಿದ್ದಾರೆ.

ಪೊಲೀಸರ ಸಮವಸ್ತ್ರವಿರಿಸಿರುವ ಬ್ಯಾಗ್ ಪತ್ತೆ ಹಿನ್ನೆಲೆಯಲ್ಲಿ ಈಗಾಗಲೇ ಹರಿದ್ವಾರ ಹಾಗೂ ಡೆಹ್ರಾಡೂನ್ ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಯಾವುದೇ ಸಮಾಜಘಾತುಕ ಘಟನೆಗಳು ನಡೆಯದಂತೆ ಎಲ್ಲೆಡೆ ತೀವ್ರ ತಪಾಸಣೆಯನ್ನು ಮಾಡಲಾಗುತ್ತಿದೆ ಎಂದು ಉತ್ತರಾಖಾಂಡ್ ನ ಡಿಜಿಪಿ ಎಂಎ ಗಣಪತಿಯವರು ತಿಳಿಸಿದ್ದಾರೆ.

ಬ್ಯಾಗ್ ನಲ್ಲಿರಿಸಿ ಪಂಜಾಬ್ ಪೊಲೀಸರ ಸಮವಸ್ತ್ರಗಳು ಪತ್ತೆಯಾಗಿದೆ. ಸಮವಸ್ತ್ರದ ಮೇಲೆ ಲುಧಿಯಾನದಲ್ಲಿ ತಯಾರು ಮಾಡಿರುವಂತಹ ಚಿಹ್ನೆಗಳಿವೆ. ಈಗಾಗಲೇ ತಪಾಸಣೆಗಾಗಿ ಅಧಿಕಾರಿಗಳನ್ನು ಲುಧಿಯಾನಾಗೆ ಕಳುಹಿಸಲಾಗಿದೆ. ಸಮವಸ್ತ್ರ ಹೊಲಿದವರ ಕುರಿತಂತ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.