ದೇಶ

ಪನ್ಸಾರೆ ಕೊಲೆ ಪ್ರಕರಣ: ತಾವ್ಡೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ

ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡ ಸನಾತನ ಸಂಸ್ಥಾನ ಸದಸ್ಯ ವಿರೇಂದ್ರ...

ಪನ್ಸಾರೆ ಕೊಲೆ ಪ್ರಕರಣ: ತಾವ್ಡೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ
ಗೋವಿಂದ್ ಪನ್ಸಾರೆ
Published On :
ಪುಣೆ: ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ ಸಂಬಂಧ, ವಿಶೇಷ ತನಿಖಾ ತಂಡ ಸನಾತನ ಸಂಸ್ಥಾನ ಸದಸ್ಯ ವಿರೇಂದ್ರ ತಾವ್ಡೆ ಅವರ ವಿರುದ್ಧ ಕೊಲ್ಲಾಪುರ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ಎಸ್ ಐಟಿ ತಾವ್ಡೆ ವಿರುದ್ಧ ಸುಮಾರು 400 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ನ್ನು ಮಂಗಳವಾರ ದಾಖಲಿಸಿದೆ.
ಈ ಮುಂಚೆ ನರೇಂದ್ರ ದಾಬೋಳ್ಕರ್ ಕೊಲೆ ಪ್ರಕರಣ ಸಂಬಂಧ ತಾವ್ಡೆಯನ್ನು ಸಿಬಿಐ ಬಂಧಿಸಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ ಸಂಬಂಧ ಕೊಲ್ಲಾಪುರ ಪೊಲೀಸರು ತಾವ್ಡೆಯನ್ನು ವಶಕ್ಕೆ ಪಡೆದಿದ್ದರು.
ಪನ್ಸಾರೆ ಕೊಲೆ ಪ್ರಕರಣದಲ್ಲಿ ತಾವ್ಡೆಯನ್ನು ಎರಡನೇ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ನಾವು ತಾವ್ಡೆ ವಿರುದ್ಧ ಕೊಲ್ಲಾಪುರ ಕೋರ್ಟ್ ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಸುಹೇಲ್ ಶರ್ಮಾ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.