ಕೂಂಬಿಂಗ್ ಕಾರ್ಯಾಚರಣೆ ಸಂಪೂರ್ಣವಾದ ಬಳಿಕ ಹುತಾತ್ಮ ಯೋಧರಿಗೆ ಸದನದಲ್ಲಿ ಶ್ರದ್ಧಾಂಜಲಿ: ವೆಂಕಯ್ಯ ನಾಯ್ಡು
ಸುಮಿತ್ರಾ ಮಹಾಜನ್ ಹೇಳಿಕೆಯನ್ನು ಬೆಂಬಲಿಸಿದ ವೆಂಕಯ್ಯ ನಾಯ್ಡು, ಕೂಂಬಿಂಗ್ ಕಾರ್ಯಾಚರಣೆ ಬಳಿಕ ಸಂಸತ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.

Published On :
ನವದೆಹಲಿ: ನಗ್ರೋಟಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸದೇ ಸಂಸತ್ ಅಧಿವೇಶನವನ್ನು ಪ್ರಾರಂಭಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಯೋಧರ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಲೋಕಸಭಾ ಕಲಾಪದಿಂದ ಪ್ರತಿಪಕ್ಷಗಳು ಹೊರನಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಪಕ್ಷಕ್ಕೆ ಸದನದಲ್ಲಿ ಚರ್ಚೆ ನಡೆಯುವುದೂ ಬೇಕಿಲ್ಲ, ಸಂಸತ್ ಕಲಾಪ ನಡೆಯುವುದೂ ಬೇಕಿಲ್ಲ. ಏಕೆಂದರೆ ಚರ್ಚೆ/ ಕಲಾಪ ನಡೆದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಹೆದರಿಕೆ ಅವರಿಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಹುತಾತ್ಮ ಯೋಧರ ವಿಷಯದಲ್ಲೂ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ, ವೆಂಕಯ್ಯ ನಾಯ್ಡು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಸುಮಿತ್ರಾ ಮಹಾಜನ್, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಷಯ ರಾಜಕೀಯ ವಿಷಯ ಅಲ್ಲ, ಆದರೆ ಕೂಂಬಿಂಗ್ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಂಪೂರ್ಣ ವರದಿ ಬರಲಿ, ಹುತಾತ್ಮ ಯೋಧರಿಗೆ ನಾವು ಎಂದಿಗೂ ಗೌರವ ಸಲ್ಲಿಸುತ್ತಾ ಬಂದಿದ್ದೇವೆ ಎಂದು ಹೇಳಿದ್ದಾರೆ. ಸುಮಿತ್ರಾ ಮಹಾಜನ್ ಹೇಳಿಕೆಯನ್ನು ಬೆಂಬಲಿಸಿದ ವೆಂಕಯ್ಯ ನಾಯ್ಡು, ಕೂಂಬಿಂಗ್ ಕಾರ್ಯಾಚರಣೆ ಬಳಿಕ ಸಂಸತ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Parliamentಶ್ರದ್ಧಾಂಜಲಿTributeಸಂಸತ್ ಅಧಿವೇಶನಹುತಾತ್ಮ ಯೋಧರುನಗ್ರೋಟಾ ಉಗ್ರ ದಾಳಿWinter session-2016Nagrota martyrs
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


