ಟ್ಯಾಕ್ಸಿ ಚಾಲಕನ ಜನಧನ್ ಖಾತೆಯಲ್ಲಿದ್ದದ್ದು ಬರೋಬ್ಬರಿ 9 ಸಾವಿರ ಕೋಟಿ!
ಪಂಜಾಬ್‍ನ ಟ್ಯಾಕ್ಸಿ ಡ್ರೈವರ್ ಬಲ್ವಿಂದರ್ ಸಿಂಗ್ ಅವರ ಜನಧನ್ ಖಾತೆಗೆ ಸುಮಾರು 98,05, 95, 12,231 ಕೋಟಿ ರು ಹಣ ಜಮೆಯಾಗಿದೆ ....

ಪಂಜಾಬ್: ಟ್ಯಾಕ್ಸಿ ಡ್ರೈವರ್ ನ ಜನಧನ್ ಖಾತೆಗೆ ಸುಮಾರು 9 ಸಾವಿರ ಕೋಟಿ ಹಣ ಜಮೆಯಾಗಿದೆ ಎಂದು ವ್ಯಕ್ತಿಯೊಬ್ಬರಿಗೆ ಸಂದೇಶ ಬಂದಿದೆ. ಇದನ್ನು ನೋಡಿದ ಚಾಲಕ ಹೌಹಾರಿದ್ದಾನೆ.
ಪಂಜಾಬ್‍ನ ಟ್ಯಾಕ್ಸಿ ಡ್ರೈವರ್ ಬಲ್ವಿಂದರ್ ಸಿಂಗ್ ಅವರ ಜನಧನ್ ಖಾತೆಗೆ ಸುಮಾರು 98,05, 95, 12,231 ಕೋಟಿ ರು ಹಣ ಜಮೆಯಾಗಿದೆ ಎಂದು ಮೆಸೇಜ್ ಬಂದಿದೆ. ಇದರಿಂದ ಗಾಬರಿಗೊಂಡ ಆತ ಬ್ಯಾಂಕ್ ಗೆ ತೆರಳಿ ಪಾಸ್ ಬುಕ್ ಎಂಟ್ರಿ ಮಾಡಿಕೊಡಲು ಕೇಳಿದ್ದಾನೆ, ಆದರೆ ಬ್ಯಾಂಕ್ ಸಿಬ್ಬಂದಿ ನಾಳೆ ಬರುವಂತೆ ಹೇಳಿ ಕಳುಹಿಸಿದ್ದಾರೆ.
ಇಷ್ಟೊಂದು ಹಣ ತನ್ನ ಖಾತೆಗೆ ಜಮೆಯಾಗಿದೆ ಬಲ್ವಿಂದರ್ ಸಿಂದ್ ಸಂಭ್ರಮಿಸಿದ್ದ, ಯಾವಾಗಲು ತನ್ನ ಖಾತೆಯಲ್ಲಿ ಮೂರು ಸಾವಿರ ಹಣ ಮಾತ್ರ ಇರುತ್ತಿತ್ತು, ಆದರೆ ಏಕಾಏಕಿ ಕೋಟಿಗಟ್ಟಲೇ ಹಣ ಬ್ಯಾಂಕ್ ಖಾತೆಗೆ ಜಮಾವಣೆ ಆದದ್ದು ಆತನಿಗೆ ಭಾರಿ ಸಂತೋಷ ತಂದಿತ್ತು, ಆದರೆ ಆತನ ಸಂಭ್ರಮಾ ತುಂಬಾ ಹೊತ್ತು ಇರಲಿಲ್ಲ. ಅಷ್ಟಕ್ಕೂ ಬಲ್ವಿಂದರ್ ಅವರ ಖಾತೆಗೆ ಕೋಟ್ಯಾಂತರ ರೂ. ಹಣ ಜಮೆ ಆಗಿರಲೇ ಇಲ್ಲ. ಬ್ಯಾಂಕ್ ಸಿಬ್ಬಂದಿಯ ಒಂದು ಸಣ್ಣ ಕೈ ತಪ್ಪು ಬಲ್ವಿಂದರ್ ಸಿಂಗ್‍ರನ್ನು ಒಂದು ಕ್ಷಣ ಕೋಟ್ಯಾಧೀಶ್ವರರನ್ನಾಗಿ ಮಾಡಿತ್ತು.
200 ರೂಪಾಯಿಯ ಕ್ರೆಡಿಟ್ ಎಂಟ್ರಿ ಮಾಡೋ ಬದಲು ಸಹಾಯಕ ಅಕೌಂಟ್ ಮ್ಯಾನೇಜರ್ ಬ್ಯಾಂಕಿನ 11 ಅಂಕಿಗಳ ಇಂಟರ್ನಲ್ ಬ್ಯಾಂಕಿಂಗ್ ಲೆಡ್ಜರ್ ಅಕೌಂಟ್ ನಂಬರನ್ನ ಹಣದ ಮೊತ್ತದ ಕಾಲಮ್‍ನಲ್ಲಿ ಬರೆದಿದ್ದರು ಎಂದು ಬ್ಯಾಂಕ್ ಮ್ಯಾನೇಜರ್ ಸಂದೀಪ್ ಗಾರ್ಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಈ ರೀತಿ ತಪ್ಪಾಗಿರುವುದು ಮರುದಿನ ಗೊತ್ತಾಗಿದ್ದು, ಮುನ್ನವೇ ಅದನ್ನು ಸರಿಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


