ದೇಶ

ಸಿಪಿಇಸಿ ಸಂಬಂಧ ಪಾಕ್ ನೊಂದಿಗೆ ರಹಸ್ಯ ಮಾತುಕತೆ ವದಂತಿ ನಿರಾಕರಿಸಿದ ರಷ್ಯಾ

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಗೌಪ್ಯ ಮಾತುಕತೆ ನಡೆಸುತ್ತಿರುವ ವರದಿಗಳನ್ನು ರಷ್ಯಾ ನಿರಾಕರಿಸಿದೆ.

ಸಿಪಿಇಸಿ ಸಂಬಂಧ ಪಾಕ್ ನೊಂದಿಗೆ ರಹಸ್ಯ ಮಾತುಕತೆ ವದಂತಿ ನಿರಾಕರಿಸಿದ ರಷ್ಯಾ
ಸಿಪಿಇಸಿ ಸಂಬಂಧ ಪಾಕ್ ನೊಂದಿಗೆ ರಹಸ್ಯ ಮಾತುಕತೆ ವದಂತಿ ನಿರಾಕರಿಸಿದ ರಷ್ಯಾ
Published On :
ನವದೆಹಲಿ: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಗೌಪ್ಯ ಮಾತುಕತೆ ನಡೆಸುತ್ತಿರುವ ವರದಿಗಳನ್ನು ರಷ್ಯಾ ನಿರಾಕರಿಸಿದೆ. 
ಸಿಪಿಇಸಿ ಯೋಜನೆಯಲ್ಲಿ ಭಾಗಿಯಾಗುವ ಬಗ್ಗೆ ರಷ್ಯಾ ಉತ್ಸಾಹ ತೋರಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ರಷ್ಯಾಗೆ ಗ್ವಾದರ್ ಬಂದನ್ನು ಬಳಸಲು ಅನುಮತಿ ನೀಡಲು ನಿರ್ಧರಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ಮಾಡಿದ್ದ ಪಾಕ್ ಮಾಧ್ಯಮ ರಷ್ಯಾ ಸಿಪಿಇಸಿಗೆ ಸಂಬಂಧಿಸಿದಂತೆ ರಷ್ಯಾ ಪಾಕಿಸ್ತಾನದೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದೆ ಎಂದು ಹೇಳಿತ್ತು. ಆದರೆ ಪಾಕ್ ಮಾಧ್ಯಮಗಳ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿರುವ ರಷ್ಯಾ, ಇದು ಸುಳ್ಳು ವರದಿ ಎಂದು ಸ್ಪಷ್ಟನೆ ನೀಡಿದೆ. 
ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟುಗಳಿಗೆ ಅದರದ್ದೇ ಆದ ಬೆಲೆ ಇದೆ. ವ್ಯಾಪಾರ ವಹಿವಾಟು ಸಂಬಂಧವನ್ನು ವೃದ್ಧಿಗೊಳಿಸುವ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ ಎಂದು ರಷ್ಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.