ದೇಶದ ಅತೀ ದೊಡ್ಡ ಯುದ್ಧ ನೌಕೆ ಎಲ್-57 ಭಾರತೀಯ ನೌಕಾಪಡೆಗೆ ಸೇರ್ಪಡೆ
ದೇಶದಲ್ಲಿಯೇ ಅತೀ ದೊಡ್ಡ ಯುದ್ಧ ನೌಕೆ, ಲ್ಯಾಂಡಿಂಗ್ ಕ್ರಾಫ್ಟ್ ಸೌಲಭ್ಯ ಹೊಂದಿರುವ ಎಲ್-57 ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ...

Published On :
ಕೊಲ್ಕತ್ತಾ: ದೇಶದಲ್ಲಿಯೇ ಅತೀ ದೊಡ್ಡ ಯುದ್ಧ ನೌಕೆ, ಲ್ಯಾಂಡಿಂಗ್ ಕ್ರಾಫ್ಟ್ ಸೌಲಭ್ಯ ಹೊಂದಿರುವ ಎಲ್-57 ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.
ಎಲ್-57 ಭಾರತದ 7ನೇ ಯುದ್ಧನೌಕೆಯಾಗಿದ್ದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿರುವುದರಿಂದ ನೌಕಾಪಡೆಗೆ ಹೆಚ್ಚು ಬಲಬಂದಂತಾಗಿದೆ. ಈ ಯುದ್ಧ ನೌಕೆಯನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಂಡಮಾನ್-ನಿಕೋಬಾರ್ ಸೇರಿದಂತೆ ಇತರೆ ದ್ವೀಪ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ನೌಕಾಪಡೆ ಕಾರ್ಯಾಚರಣೆ ನಡೆಸಲು ಸುಲಭವಾಗುತ್ತದೆ ಎಂದು ನಿವೃತ್ತ ಸೇನಾಧಿಕಾರಿ ಎ.ಕೆ ವರ್ಮಾ ಹೇಳಿದ್ದಾರೆ.
ಎಲ್-57 ಯುದ್ಧ ನೌಕೆಯು ಎರಡು ಯುದ್ಧ ಟ್ಯಾಂಕರ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು. ದೂರದ ಪ್ರದೇಶಗಳಲ್ಲಿ 160 ಸೇನಾ ತುಕಡಿಗಳನ್ನು ಸಾಗಿಸಲು ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ.
ಎಲ್-57 ಯುದ್ಧ ನೌಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯುದ್ಧ ನೌಕೆಯಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಶ್ ರಾಮ್ ರಾವ್ ಬಮ್ರೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


