ಕಾಶ್ಮೀರದ ಶೇ.90ರಷ್ಟು ಮಂದಿ ಶಾಂತಿ ಬಯಸುತ್ತಾರೆ: ಶ್ರೀ ರವಿ ಶಂಕರ್ ಗುರೂಜಿ
ಕಾಶ್ಮೀರದಲ್ಲಿರುವ ಶೇ 90 ರಷ್ಟು ಜನ ಶಾಂತಿಯನ್ನು ಬಯಸುತ್ತಾರೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ...

ಜಮ್ಮು: ಕಾಶ್ಮೀರದಲ್ಲಿರುವ ಶೇ 90 ರಷ್ಟು ಜನ ಶಾಂತಿಯನ್ನು ಬಯಸುತ್ತಾರೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಜಮ್ಮುವಿನಲ್ಲಿ ನಡೆದ ಸೌತ್ ಏಷಿಯನ್ ಫೋರಂ ಫಾರಂ ಪೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆ ಸೃಷ್ಟಿಯಾಗಿರುವುದು ಕಾಶ್ಮೀರಿಗಳಿಂದಲೇ, ಹೀಗಾಗಿ ಅವರೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು, ಅದಕ್ಕಾಗಿಯೇ ನಾವು ವೇದಿಕೆ ಕಲ್ಪಿಸಿದ್ದೇವೆ ಎಂದು ಹೇಳಿದ್ದಾರೆ.
ಶೇ. 90 ರಷ್ಟು ಜನಕ್ಕೆ ಶಾಂತಿ ಬೇಕಾಗಿದೆ. ಆದರೆ ಬಂದೂಕಿನ ಭಯದಿಂದ ಯಾರೊಬ್ಬರು ಬಾಯಿ ತೆರೆಯದೇ ಬಾಯಿ ಮುಚ್ಚಿದ್ದಾರೆ, ದೇಶದ ಅಭಿವೃದ್ಧಿಗಾಗಿ ಅವರು ಮುಚ್ಚಿರುವ ತಮ್ಮ ಬಾಯಿ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು, ಇದೊಂದು ಸೂಕ್ತ ವೇದಿಕೆಯಾಗಿದೆ. ಹಣ ಹಸುವಿಗಾಗಿ ಕಾಶ್ಮೀರದಲ್ಲಿ ಕದನ ನಡೆಯುತ್ತಿದೆ. ಇದರಿಂದ ಇಲ್ಲಿನ ಜನಗಳು ತೊಂದರೆ ಅನುಭವುಸುತಿತುರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


