ದೇಶ

ರಾಜಕೀಯಕ್ಕೆ ಬರುವುದು ಇಂದಿರಾಗಾಂಧಿಗೆ ಇಷ್ಟವಿರಲಿಲ್ಲ: ಸೋನಿಯಾ ಗಾಂಧಿ

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ...

ರಾಜಕೀಯಕ್ಕೆ ಬರುವುದು ಇಂದಿರಾಗಾಂಧಿಗೆ ಇಷ್ಟವಿರಲಿಲ್ಲ: ಸೋನಿಯಾ ಗಾಂಧಿ
ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ
Published On :

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವರಿಗೆ ಸಾಮಾನ್ಯ ಮಹಿಳೆಯಾಗಿ ಜೀವನ ನಿರ್ವಹಿಸಬೇಕೆಂಬ ಆಸೆ ಇತ್ತು ಎಂದು ಎಐಸಿಸಿ ಅಧ್ಯಕ್ಷೆ ಹಾಗೂ ಇಂದಿರಾ ಸೊಸೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನಿಯಾ ಗಾಂಧಿ, ಸಾಮಾನ್ಯ ಮಹಿಳೆಯಂತೆ ಜೀವಿಸಬೇಕು ಎಂದು ಬಯಸಿದ್ದ ಇಂದಿರಾ ಅವರನ್ನ ಜನ ರಾಜಕೀಯಕ್ಕೆ ಕರೆ ತಂದರು. ರಾಜಕೀಯದ ಬಗ್ಗೆ ಇಂದಿರಾ ಅವರಿಗೆ ಆಸಕ್ತಿ ಇರಲಿಲ್ಲ ಎಂಬ ಸತ್ಯ ಕೇವಲ ಕೆಲವರಿಗೆ ಮಾತ್ರ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಜಾತ್ಯಾತೀತತೆ ಎಂಬುದು ಭಾರತೀಯ ರಾಜಕೀಯಕ್ಕೆ ಇಂದಿರಾಗಾಂಧಿ ಅವರು ನೀಡಿದ ಬಹು ದೊಡ್ಡ ಕೊಡುಗೆಯಾಗಿದೆ.ಜನರೇ ಆಕೆಯ ಶಕ್ತಿಯಾಗಿದ್ದರು. ತುಳಿತಕ್ಕೊಳಗಾದ ಜನರ ಬಗ್ಗೆ ಅತೀವ ಆಸಕ್ತಿ ಹಾಗೂ ಕಾಳಜಿ ಇಂದಿರಾಗಾಂಧಿ ಅವರಿಗಿತ್ತು. ಆದರೆ ಪ್ರಸಕ್ತ ರಾಜಕಾರಣದಲ್ಲಿ ಅವೆಲ್ಲಾ ಮಾಯವಾಗಿವೆ ಎಂದು ಸೋನಿಯಾ ತಿಳಿಸಿದ್ದಾರೆ.

ಜನತೆಗಾಗಿಯೇ ತಮ್ಮನ್ನು ಮೀಸಲಿಟ್ಟಿದ್ದ ಏಕೈಕ ಮಹಿಳೆ ಇಂದಿರಾಗಾಂಧಿ, ಬಹಳ ಚತುರಮತಿ ಉಳ್ಳವರಾಗಿದ್ದರು ಎಂದು ಸೋನಿಯಾ ಹೊಗಳಿದ್ದಾರೆ.

ತುಂಬಾ ಬುದ್ಧಿವಂತೆಯಾಗಿದ್ದ ತಮ್ಮ ಅತ್ತೆ ತನಗೆ ಹೊಸ ಉಡುಗೆ, ಊಟ, ಹೊಸ ಸಂಸ್ಕೃತಿ, ಬಗ್ಗೆ ಕಲಿಸಿಕೊಟ್ಟರು. ಜೊತೆಗೆ ಅವರ ಸೆನ್ಸ್ ಆಫ್ ಹ್ಯೂಮರ್ ಮೆಚ್ಚುವಂತದ್ದು ಎಂದು ತಮ್ಮ ಅತ್ತೆಯ ಬಗ್ಗೆ ಹಿಂದಿನ ನೆನಪುಗಳನ್ನು ಸೋನಿಯಾಗ ಗಾಂಧಿ ಮೆಲುಕು ಹಾಕಿದ್ದಾರೆ.

ಉತ್ತಮ ಬರಹಗಾರ್ತಿಯಾಗಿದ್ದ ಇಂದಿರಾ, ನಾನು ಸೇರಿದಂತೆ ಕುಟುಂಬದ ಇತರ ಸದಸ್ಯರಿಗೂ ಸಣ್ಣ ಸಣ್ಣ ನೋಟ್ ಗಳನ್ನು ಬರೆದು ಕೊಡುತ್ತಿದ್ದರು, ಎಲ್ಲದರಲ್ಲೂ ಅತೀವ ಆಸಕ್ತಿ ಹೊಂದಿದ್ದ ಇಂದಿರಾ ಸಂಗೀತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.